ಅರಸೀಕೆರೆ: ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ ಸಂಬಂಧಿಸಿದಂತೆ ರಾಜಕೀಯ ಮಾಡಲು ಹೊರಟಿರುವ ಶಾಸಕ ಶಿವಲಿಂಗೇಗೌಡರು, ಜೇನು ಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಾದವರಲ್ಲ. ಅಂತಹ ಮಹಾನ್ ದಾರ್ಶನಿಕರ ಹೆಸರನ್ನು ಇವರ ರಾಜಕೀಯ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಅವರ ಹಿಂಬಾಲಕರನ್ನು ಕಟ್ಟಿಕೊಂಡು ಏಕಾಏಕಿ ಪಿ.ಪಿ. ವೃತ್ತದ ಸಮೀಪ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸುತ್ತೇವೆ ಎಂದು ಹೇಳುವವರು ಇವರೇ. ಮರು ದಿನ ಬೆಳಿಗ್ಗೆ ಇವರು ನಿಗದಿ ಪಡಿಸಿದ ಜಾಗ ಸಾರಿಗೆ ಸಂಸ್ಥೆಗೆ ಸೇರಿದ್ದು, ಅವರು ಕಟ್ಟಡ ಕಟ್ಟುತ್ತಾರೆ. ಇದು ಹೇಗೆ ಸಾಧ್ಯ? ಬಸವಣ್ಣನವರ ಹೆಸರನ್ನು ಬಸ್ ನಿಲ್ದಾಣಕ್ಕೆ ಇಡುವುದಾಗಿ ಇವರೇ ಘೋಷಿಸಿದ್ದಾರೆ. ಮತ್ತೊಂದೆಡೆ ಬಸ್ ನಿಲ್ದಾಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಸ್ಥಳ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಾರಿಗೆ ಸಂಸ್ಥೆ ರಾಜ್ಯ ಸರ್ಕಾರದ ಅಧೀನಕ್ಕೆ ಬರುವುದಿಲ್ಲವೇ ಅಥವಾ ಪಾಕಿಸ್ತಾನಕ್ಕೆ ಸೇರಿದೆಯೇ ಎಂದು ಶಾಸಕರು ಉತ್ತರಿಸಲಿ. ಅದನ್ನು ಬಿಟ್ಟು ಕಾಣದ ಕೈಗಳು ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹಿಂಬಾಲಕರ ಕೈಯಲ್ಲಿ ಸುದ್ದಿಗೋಷ್ಠಿ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಸವಣ್ಣ, ಸಂಗೊಳ್ಳಿ ರಾಯಣ್ಣ ಅವರಂಥ ದಾರ್ಶನಿಕರ ಹೆಸರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಶಿವಲಿಂಗೇಗೌಡರಿಗೆ ಕ್ಷೇತ್ರದ ಜನತೆಯ ಪಾಠ ಕಲಿಸುವ ಕಾಲ ದೂರ ಇಲ್ಲ ಎಂದು ಸವಾಲು ಹಾಕಿದರು.

ಶಿವಲಿಂಗೇಗೌಡರಿಗೆ ನಿಜವಾಗಲೂ ಬಸವಣ್ಣನವರ ಮೇಲೆ ಗೌರವವಿದ್ದರೆ, ಪಿ.ಪಿ. ವೃತ್ತದ ಮತ್ತೊಂದು ಬದಿಯಲ್ಲಿ ನಗರಸಭೆ ಅಳವಡಿಸಿರುವ ಹೈಮಾಸ್ಟ್ ದೀಪ ಹಾಗೂ ಎಲ್ಇಡಿ ಸ್ಕ್ರೀನ್ ಅನ್ನು ತೆರವುಗೊಳಿಸಿ, ಅಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿದರೆ ಸೂಕ್ತ. ಪಿ.ಪಿ. ವೃತ್ತದ ಹೆಸರೂ ಇರುತ್ತದೆ. ಈ ನಿಟ್ಟಿನಲ್ಲಿ ಸ್ವಾರ್ಥ ಬಿಟ್ಟು ಶಿವಲಿಂಗೇಗೌಡರು ಯೋಚಿಸಲಿ ಎಂದು ಸಲಹೆ ನೀಡಿದರು.

ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಸ್ಮಶಾನಕ್ಕೆ ಸಂಬಂಧಿಸಿದಂತೆ ಶಾಸಕರು ರಾಜಕಾರಣ ಮಾಡಿದ್ದು, ಆ ಸಮಿತಿಗೂ ತಮ್ಮ ಹಿಂಬಾಲಕರನ್ನೇ ಪದಾಧಿಕಾರಿಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಭೋಜ ನಾಯಕ್, ದುಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜ್ಜಪ್ಪ, ಮುಖಂಡರಾದ ಮಾಲಿಂಗಪ್ಪ ಕೃಷ್ಣಮೂರ್ತಿ ಕುಮಾರ್, ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.