ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಭಿವೃದ್ಧಿಗಾಗಿ ಹೋರಾಟ ನಿಂತಿಲ್ಲ: ಎಚ್.ಡಿ.ದೇವೇಗೌಡ

ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಭಿಮತ
Last Updated 26 ಮಾರ್ಚ್ 2022, 15:12 IST
ಅಕ್ಷರ ಗಾತ್ರ

ಹಾಸನ: ‘ರಾಜ್ಯದ ಅಭಿವೃದ್ಧಿಗೆ ಮತ್ತು ಜನರ ಪರವಾಗಿ ಹೋರಾಟಮಾಡುವುದು ನಿಂತಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ನಗರದಎಂ.ಜಿ.ರಸ್ತೆಯ ರಾಮಕೃಷ್ಣ ಆಸ್ಪತ್ರೆ ಎದುರಿನ ಸಿಂಹಾಸನ ಪುರಿಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನನ್ನ ವಯಸ್ಸು 90. ಮೊದಲಿನಂತೆ ಓಡಾಡಲು ಆಗುವುದಿಲ್ಲ. ಆದರೆ, ರಾಜ್ಯದ ಅಭಿವೃದ್ಧಿಗಾಗಿ ಕಿಂಚಿತ್‌ ಆದರೂ ಹೋರಾಟ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ಸಂಸತ್‌ನಲ್ಲೂ ಜನರ ಸಮಸ್ಯೆಗಳ ಬಗ್ಗೆಮಾತನಾಡಿದ್ದೇನೆ’ ಎಂದರು.

‘1,800 ವರ್ಷ ಇತಿಹಾಸ ಹೊಂದಿರುವ ದೊಡ್ಡ ಬಸದಿ ಜೀರ್ಣೋದ್ಧಾರಮಾಡಿರುವುದು ಒಳ್ಳೆಯ ಬೆಳವಣಿಗೆ. ಶಾಂತಿ ನೆಲೆಸಲು ತೀರ್ಥಂಕರರು ಸಮಾಜಕ್ಕೆ ನೀಡಿದ ಕೊಡುಗೆಅಪಾರ. ಜನರ ಸಹಕಾರದೊಂದಿಗೆ ರಾಜ್ಯದ ಅನೇಕ ಬಸದಿಗಳಜೀರ್ಣೋದ್ಧಾರ ಮಾಡುವುದರಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರಮ ಸಾಕಷ್ಟಿದೆ’ ಎಂದು ನುಡಿದರು.

ಜೈನ ಮುನಿ ಪುಣ್ಯಸಾಗರ ಮಹಾರಾಜ ಮಾತನಾಡಿ, ‘ಅನಾದಿಕಾಲದಿಂದಲೂ ಜಿನಧರ್ಮ ಇದೆ. ಧರ್ಮ ಇರುವುದರಿಂದಲೇ ಇಂದು ಸಾಧು, ಸಂತರು, ಮುನಿಗಳುವಿಹಾರ ಮಾಡುತ್ತಿದ್ದಾರೆ. ಯಾವುದೇ ಧರ್ಮ ಮತ್ತು ಜಾತಿ ಭೇದ ಇಲ್ಲದೆ ಎಲ್ಲರಿಗೂ ಉಪದೇಶಮಾಡಲಾಗುವುದು. ಪಂಚಕಲ್ಯಾಣ ಮಹೋತ್ಸವಕ್ಕಾಗಿಯೇ 300 ಕಿ.ಮೀ ಕಾಲ್ನಡಿಗೆಯಲ್ಲಿ ಬಂದಿದ್ದೇನೆ’ ಎಂದರು.

ವೀರ ಸಾಗರ ಮಹಾರಾಜ ಮಾತನಾಡಿ, ‘ಅಡಗೂರು ಸಮೀಪದ ಜೈನರಗುತ್ತಿಯಲ್ಲಿ 31 ಅಡಿ ಎತ್ತರದ ಮುನಿಸೂರ್ಪತ್‌ ತೀರ್ಥಂಕರರ ಪ್ರತಿಮೆಅನಾವರಣ ಏ.15ರಂದು ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಬೆಳಗೊಳ ಕ್ಷೇತ್ರದಸರ್ವಾಂಗೀಣ ಅಭಿವೃದ್ಧಿಗೆ ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಮತ್ತುಎಚ್.ಡಿ.ರೇವಣ್ಣ ನೀಡಿದ ಕೊಡುಗೆ ಮರೆಯುವಂತಿಲ್ಲ’ ಎಂದರು.

ವಿದ್ವಾನ್‌ ಶ್ರೀಧರ್ ಜೈನ ಮತ್ತು ತಂಡದವರು ಪಾರ್ಶ್ವನಾಥ ಪದ್ಮಾವತಿನೃತ್ಯರೂಪಕ ಹಾಗೂ ನೃತ್ಯ ವೈಭವ ಪ್ರಸ್ತುತ ಪಡಿಸಿದರು.

ಭಾರತೀಯ ಜೈನ್ ಮಿಲನ್‌ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಸ್ವಾದಿ ಕ್ಷೇತ್ರದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಐಪಿಎಸ್ಅಧಿಕಾರಿ ಜಿನೇಂದ್ರ ಖನಗಾವಿ, ಗೊಮ್ಮಟವಾಣಿ ಸಂಪಾದಕ ಎಸ್‌.ಎನ್.ಅಶೋಕ್ ಕುಮಾರ್‌, ಜೈನ ಸಂಘದ ಅಧ್ಯಕ್ಷ ಅಜಿತ್ ಕುಮಾರ್ಹಾಜರಿದ್ದರು. ಶ್ರುತಿ ಧನೂಶ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT