ಹಳೇಬೀಡು: ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದ ಕೊನೆಯ ದಿನವಾದ ಬುಧವಾರ ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್, ಹರುಬಿಹಳ್ಳಿಯ ಗುರುಸ್ವಾಮಿ ಗೌಡರ ತೋಟದಲ್ಲಿ ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿಕೆ ತೋರಿಸಿ ತೋಟದಲ್ಲಿ ಪಾಠ ಹೇಳಿದರು.

ಹೊರ ದೇಶ, ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಬಂದಿದ್ದ ರೈತರು, ನೈಸರ್ಗಿಕ ಕೃಷಿ ಅಳವಡಿಸಿರುವ ತೋಟದ ಉಪಯುಕ್ತತೆ ತಿಳಿದುಕೊಂಡರು.

ತೋಟದಲ್ಲಿ ಹೂವಿನಂತೆ ಮೃದವಾಗಿರುವ ಮಣ್ಣಿನ ಮೇಲೆ ನಡೆದಾಡಿದ ರೈತರು ಸಂತಸ ವ್ಯಕ್ತಪಡಿಸಿದರು. ತುಂತುರು ನೀರಾವರಿ ಮೂಲಕ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆಸಿರುವ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. ತೋಟದ ಗಾಳಿ ಸೇವಿಸಲು ಅಹ್ಲಾದಕರವಾಗಿದ್ದು, ವಾತಾವರಣ ಆರೋಗ್ಯಕರವಾಗಿದೆ ಎಂದು ದೂರದಿಂದ ಬಂದಿದ್ದ ರೈತರು ಸಂಭ್ರಮಿಸಿದರು.

ಸುಭಾಷ್ ಪಾಳೇಕರ್ ಹಾಗೂ ನೈಸರ್ಗಿಕ ತೋಟದ ಮಾಲೀಕ ಗುರುಸ್ವಾಮಿ ಗೌಡ ಅವರೊಂದಿಗೆ ಕಾರ್ಯಾಯಗಾರದಲ್ಲಿ ಭಾಗವಹಿಸಿದ್ದ ರೈತರು ಮಾಹಿತಿ ಪಡೆದರು.

ತೋಟ ಸುತ್ತಾಡಿದ ರೈತರು, ನೈಸರ್ಗಿಕ ಕೃಷಿಯ ಜ್ಞಾನ ಸಂಪಾದಿಸಿದರು. 4 ದಿನ ಆಡಿಟೋರಿಯಂನ ನಾಲ್ಕು ಗೋಡೆಯ ನಡುವೆ ಪಾಠ ಕೇಳಿದ ರೈತರು, ತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಪಾಠ ಅರ್ಥೈಸಿಕೊಂಡರು.

ತೋಟಗಳಲ್ಲಿ ಅತಿಯಾದ ತೇವಾಂಶ ಸಹ ಇರಬಾರದು. ಸಸ್ಯಗಳ ಬೇರು ನೀರನ್ನು ಸೇವಿಸುವುದಿಲ್ಲ. ನೀರಿನ ಆವಿಯನ್ನು ಮಾತ್ರ ಸಂಗ್ರಹಿಸಿಕೊಂಡು ಗಿಡದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದು ಹೇಳಿದ ಸುಭಾಷ್ ಪಾಳೇಕರ್ ಗಿಡದ ಸುತ್ತಲಿನ ಮಣ್ಣಿನಲ್ಲಿಯೇ ಉಳಿದಿರುವ ತೇವಾಂಶ ತೋರಿಸಿದರು.

ನೀರನ್ನು ಅನಗತ್ಯ ಪೋಲು ಮಾಡದೇ ಅಗತ್ಯ ಪ್ರಮಾಣದ ನೀರನ್ನು ಮಾತ್ರ ಬೆಳೆಗಳಿಗೆ ಕೊಡಬೇಕು ಎಂದು ಸಲಹೆ ಮಾಡಿದರು.

ಪುಷ್ಪಗಿರಿ ಸುತ್ತಲಿನ ಮಣ್ಣು ವಿವಿಧ ಬೆಳೆಗಳಿಗೆ ಹೊಂದಿಕೊಳ್ಳುತ್ತದೆ ಎಂದು ದೂರದಿಂದ ಬಂದಿದ್ದ ರೈತರು ಸಂತಸ ವ್ಯಕ್ತಪಡಿಸಿದರು. ನೇಪಾಳ ಹಾಗೂ ಭಾರತದ ವಿವಿಧ ಭಾಗದ ರೈತರೊಂದಿಗೆ ಸುಭಾಷ್ ಪಾಳೇಕರ್ ಅವರಿಂದ ಕೇಳಿದ ತೋಟದಲ್ಲಿ ಪಾಠ ಜೀವನದುದ್ದಕ್ಕೂ ಬೇಕಾಗುತ್ತದೆ ಎಂದು ರೈತ ಹರುಬಿಹಳ್ಳಿ ದಿವಾಕರ ಹೇಳಿದರು.

ಪಾಳೇಕರ್ ಭೇಟಿಯಿಂದ ಸಂತಸ

ನಮ್ಮ 3 ಎಕರೆ ತೋಟದಲ್ಲಿ 20 ವರ್ಷದಿಂದ ನೈಸರ್ಗಿಕ ಕೃಷಿ ಕೈಗೊಂಡಿದ್ದೇನೆ. ಸುಭಾಷ್ ಪಾಳೇಕರ್ ಅವರ ಹಲವು ಕಾರ್ಯಾಗಾರದಲ್ಲಿ ಭಾಗವಹಿಸಿ ಸಾಕಷ್ಟು ಕಲಿತಿದ್ದೇನೆ. ನೈಸರ್ಗಿಕ ಕೃಷಿ ಸಂಶೋಧಕ ಪಾಳೇಕರ್ ನಮ್ಮ ತೋಟಕ್ಕೆ ಭೇಟಿ ನೀಡಿದ್ದರಿಂದ ನಮಗೆ ಸಂತೋಷವಾಯಿತು ಎಂದು ರೈತ ಗುರುಸ್ವಾಮಿ ಗೌಡ ಹೇಳಿದರು. ರಸಗೊಬ್ಬರ ಬಳಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ಜೀವಾಮೃತ ಕೊಡುತ್ತೇವೆ. ತುಂತುರು ನೀರಾವರಿಯಿಂದ ಅಗತ್ಯಕ್ಕೆ ತಕ್ಕಷ್ಟು ನೀರು ಕೊಡುತ್ತೇವೆ. ಹೀಗಾಗಿ ಮರ ಗಿಡಗಳು ಹಸಿರಾಗಿವೆ. ನಮ್ಮ ತೋಟದಲ್ಲಿ ಟ್ರ್ಯಾಕ್ಟರ್ ಬೇಸಾಯ ಮಾಡುವುದಿಲ್ಲ. ತೋಟದ ಸುತ್ತ ತೇಗ ಹೆಬ್ಬೇವು ಸಿಲ್ವರ್ ಗಿಡ ಬೆಳೆಸಿದ್ದೇನೆ. ತೆಂಗು ಅಡಿಕೆ ಜೊತೆಯಲ್ಲಿ. ಜಾಯಿಕಾಯಿ ಸೀಬೆ ಪಪ್ಪಾಯಿ ವಿಳ್ಯದೆಲೆ ಬೆಳೆದಿದ್ದೇವೆ. ನೈಸರ್ಗಿಕ ಕೃಷಿಯಿಂದ ತೋಟ ಸಮೃದ್ಧವಾಗಿದೆ ಎಂದು ತಿಳಿಸಿದರು.

ತ್ಯಾಜ್ಯದ ಹೊದಿಕೆಯಿಂದ ಕಳೆ ನಿಯಂತ್ರಣ

ತೋಟದಲ್ಲಿ ಕಳೆ ಇಲ್ಲದ ತ್ಯಾಜ್ಯ ಬಿದ್ದ ಸ್ಥಳ ಕಳೆ ಬೆಳೆದಿರುವ ಖಾಲಿ ಸ್ಥಳವನ್ನು ಸುಭಾಷ್ ಪಾಳೇಕರ್ ರೈತರಿಗೆ ತೋರಿಸಿದರು. ತ್ಯಾಜ್ಯ ಬಿದ್ದ ಸ್ಥಳದ ಅಡಿಯಲ್ಲಿರುವ ಮಣ್ಣಿನಲ್ಲಿಯೂ ಕಳೆಯ ಬೀಜಗಳಿರುತ್ತವೆ. ಮೊಳಕೆ ಒಡೆದ ಬೀಜ ಕಳೆಯಾಗಿ ಬೆಳೆಯಲು ಅವಕಾಶ ಇರುವುದಿಲ್ಲ. ತೋಟದ ಮಣ್ಣಿಗೆ ತ್ಯಾಜ್ಯದ ಹೊದಿಕೆ ಹಾಕುವುದರಿಂದ ಕಳೆನಾಶಕ ಸಿಂಪಡಣೆ ಅಗತ್ಯ ಇರುವುದಿಲ್ಲ. ತ್ಯಾಜ್ಯದ ಹೊದಿಕೆ ಅಧಿಕ ತೇವಾಂಶ ಸಂಗ್ರಹಿಸಿಕೊಂಡು ಸಸ್ಯದ ಬೆಳವಣೆಗೆಗೆ ಅನುಕೂಲ ಮಾಡಿಕೊಡುತ್ತದೆ. ಒಣ ಹೊದಿಕೆ ಹಸಿರು ಹೊದಿಕೆ ಹಾಗೂ ಮಣ್ಣಿನ ಹೊದಿಕೆಯನ್ನು ಕಾಲಮಾನಕ್ಕೆ ತಕ್ಕಂತೆ ತೋಟದಲ್ಲಿ ರೂಪಿಸಬೇಕು ಎಂದು ಪಾಳೇಕರ್ ವಿವರಿಸಿದರು.

ನಮ್ಮ ತೋಟದಲ್ಲಿಯೂ ನೈಸರ್ಗಿಕ ಕೃಷಿ ಅಳವಡಿಸಿಕೊಂಡಿದ್ದೇವೆ. ತೋಟದಲ್ಲಿ ಸುಭಾಷ್ ಪಾಳೇಕರ್ ಅವರು ಪ್ರಾತ್ಯಕ್ಷಿಕೆ ತೋರಿಸಿದ್ದರಿಂದ ಹೆಚ್ಚಿನ ಜ್ಞಾನ ಸಂಪಾದನೆ ಆಯಿತು
ರುದ್ರೇಶ್ ಸೋಪ್ಪಿನಹಳ್ಳಿ, ನೈಸರ್ಗಿಕ ಕೃಷಿಕ

ರೈತರು ತಮ್ಮ ಜಮೀನುಗಳಿಗೆ ಮಾತ್ರ ಸಿಮೀತವಾಗದೇ ವಿಭಿನ್ನ ಕೃಷಿ ಕ್ಷೇತ್ರದ ದರ್ಶನ ಮಾಡಬೇಕು. ತೋಟದಲ್ಲಿ ಪಾಳೇಕರ್ ಪಾಠ ಹೇಳಿದ್ದರಿಂದ ರೈತರಿಗೆ ಹೊಸ ವಿಚಾರ ತಿಳಿಯಿತು
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.