ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದ ಮನುಕುಲದ ಸ್ಫೂರ್ತಿ

ಜಿಲ್ಲಾ ರೆಡ್ ಕ್ರಾಸ್‍ ಉಪಸಭಾಪತಿ ಡಾ. ಗುರುರಾಜ್ ಹೆಬ್ಬಾರ್ ಅಭಿಮತ
Last Updated 16 ಜನವರಿ 2021, 2:54 IST
ಅಕ್ಷರ ಗಾತ್ರ

ಹಾಸನ: ಸ್ವಾಮಿ ವಿವೇಕಾನಂದ ಮನುಕುಲದ ಸ್ಪೂರ್ತಿ ಸೆಲೆಯ ಶಕ್ತಿ ಎಂದು ಜಿಲ್ಲಾ ರೆಡ್ ಕ್ರಾಸ್‍ನ ಉಪಸಭಾಪತಿ ಡಾ. ಗುರುರಾಜ್ ಹೆಬ್ಬಾರ್ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರಿಯ ಯುವ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರ ಸ್ಪೂರ್ತಿದಾಯಕ ಮಾತುಗಳನ್ನ ಇಂದಿಗೂ ಸ್ಮರಿಸುತ್ತೇವೆ ಎಂದರೆ ಅವರ ಶಕ್ತಿ ಎಂತಹದ್ದು ಎಂಬುದನ್ನು ತಿಳಿಯಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.

ಜಿಲ್ಲಾ ಕ್ಷಯ ಮತ್ತು ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಮಾತನಾಡಿ, ದೇಶದಲ್ಲಿ ಯುವ ಜನಸಂಪತ್ತು ಹೆಚ್ಚಾಗಿದೆ. ಆದರೆ, ಅದರ ಸದ್ಬಳಕೆಯಾಗಬೇಕಿದೆ. ಯಾವುದೇ ದೇಶದ ಅಭಿವೃದ್ದಿಗೆ ಯುವಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಜಿಲ್ಲಾ ರೆಡ್ ಕ್ರಾಸ್‍ ಸಭಾಪತಿ ಹೆಮ್ಮಿಗೆ ಮೊಹನ್‌ ಮಾತನಾಡಿದರು.ರಾಷ್ಟ್ರಿಯ ಯುವ ದಿನದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಡ್ಯಾಪ್ಕ್ಯೂ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್‌, ಕಾಲೇಜಿನ ಪ್ರಾಂಶುಪಾಲ ಕೆ.ಟಿ ಕೃಷ್ಣೇಗೌಡ, ರೆಡ್ ಕ್ರಾಸ್‍ ನಿರ್ದೇಶಕರಾದ ಕೆ.ಟಿ ಜಯಶ್ರೀ, ನಿರ್ಮಲ, ಚಂದನ್, ಕಾಲೇಜಿನ ಎನ್.ಎಸ್.ಎಸ್ ಮತ್ತು ರೆಡ್ ರಿಬ್ಬನ್ ಅಧಿಕಾರಿ ಯೋಗಿಶ್, ಯುವರೆಡ್ ಕ್ರಾಸ್ ರಾಮೇಗೌಡ, ಆರೋಗ್ಯ ಶಿಕ್ಷಾಣಾಧಿಕಾರಿ ಆರುಂಧತಿ, ಮಂಜುಳಾ, ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT