ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರ್ಚ್ ಹಾಗೂ ಮನೆಯ ಕಟ್ಟಡ ಬೀಳುವ ಆತಂಕ ಉಂಟಾಗಿದೆ. ಈಗಾಗಲೆ ಸಾಕಷ್ಟು ಭೂಮಿ ಕುಸಿದಿದ್ದು ಇನ್ನೂ ಕುಸಿಯುವ ಸಾಧ್ಯತೆ ಕಂಡು ಬಂದಿದೆ.
ಡಾ. ಫ್ರಾನ್ಸಿಸ್ ಚರ್ಚ್‌ನ ಫಾದರ್
‘ಟವರ್ ಬೀಳುವ ಆತಂಕ’
ಇದು ಪ್ರಾಕೃತಿಕ ವಿಕೋಪದಿಂದ ಆಗಲಿರುವ ಹಾನಿ ಅಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳ ಯೋಜನೆ ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿಯ ಪರಿಣಾಮ. ಚರ್ಚ್‌ಗೆ ಹೊಂದಿಕೊಂಡಂತೆ ಬಿಎಸ್‌ಎನ್‌ಎಲ್ ಟವರ್ ಹಾಗೂ ಟವರ್‌ನ ಕಂಟ್ರೋಲ್ ಕೊಠಡಿ ಸಹ ಇದ್ದು ಕೆಳಭಾಗದಲ್ಲಿ ಭೂಮಿ ಕತ್ತರಿಸಿರುವುದರಿಂದ ಗುಡ್ಡ ಕುಸಿಯುತ್ತಿದೆ. ಇದರಿಂದ ಕಟ್ಟಡದ ತಳಪಾಯವೇ ಸಡಿಲ ಆಗಿದ್ದು ವೇಗವಾಗಿ ಬೀಸುತ್ತಿರುವ ಗಾಳಿ ಹಾಗೂ ಮಳೆಗೆ ಟವರ್ ಬೀಳುವ ಆತಂಕ ಗ್ರಾಮಸ್ಥರದ್ದಾಗಿದೆ.