ಕೊಣನೂರು: ಆಯ್ದ ಭಾಗಗಳಲ್ಲಿ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎಂಬ ದೂರುಗಳು ಬಂದಿದ್ದು, ಮೊದಲನೆ ವಿತರಣಾ ನಾಲೆಯಿಂದ ಕೊನೆಯ ವಿತರಣಾ ನಾಲೆಯವರೆಗೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಸಂಪೂರ್ಣ ಕೆಲಸ ನಿರ್ವಹಿಸುವ ಹಾಗೆ ಅಧಿಕಾರಿಗಳು ನೋಡಿಕೊಳ್ಳಬೇಕು. ಆ ಮೂಲಕ ನಾಲಾ ವ್ಯಾಪ್ತಿಯಲ್ಲಿ ನೀರು ಕೊನೆಯ ಹಂತದವರೆಗೂ ಹರಿಯಲು ಅವಕಾಶ ಕಲ್ಪಿಸಬೇಕು ಎಂದು ಹಾರಂಗಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ.ಚೌಡೇಗೌಡ ಸೂಚನೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾರಂಗಿ ಮಹಾಮಂಡಳ, ಹಾರಂಗಿ ನೀರು ಬಳಕೆದಾರರರ ಸಹಕಾರ ಸಂಘ ಮತ್ತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ನಾಲೆಗಳ ದುರಸ್ತಿ, ಹೂಳು ತೆಗೆಯುವಿಕೆ, ಸ್ವಚ್ಛತೆ ಮತ್ತಿತರ ಕೆಲಸಗಳನ್ನು ಗುತ್ತಿಗೆದಾರರ ಮೂಲಕ ಅಧಿಕಾರಿಗಳು ಮಾಡಿಸಬೇಕು. ಈಗಾಗಲೆ ನಾಲೆಯ ದುರಸ್ತಿ, ಹೂಳು ತೆಗೆಯುವಿಕೆ, ಸ್ವಚ್ಛತೆ ಮತ್ತಿತರ ಕೆಲಸಗಳು ಆರಂಭವಾಗಿ ಮುಗಿಯುವ ಹಂತಕ್ಕೆ ಬಂದಿದ್ದರೂ ಕೆಲವು ಕಡೆಗಳಲ್ಲಿ ಸರಿಯಾದ ಕಾಮಗಾರಿ ನಿರ್ವಹಿಸದೆ ನಾಲೆಯಲ್ಲಿ ನೀರು ಹರಿಯುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬಂದಿವೆ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂದರು.

ಕೊಣನೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಕುಮಾರ್, ಸಹಾಯಕ ಎಂಜಿನಿಯರ್ ದೀಪಕ್, ವೆಂಕಟೇಶ್, ಗೌತಮ್, ಮಹಾಮಂಡಳದ ಕಾರ್ಯದರ್ಶಿ ಮಹೇಶ್, ಹಾರಂಗಿ ಮಹಾಮಂಡಲದ ನಿರ್ದೇಶಕ ಜಿಟ್ಟೇನಹಳ್ಳಿ ಅಶೋಕ್, ಕೇಶವೇಗೌಡ, ಶಿವಣ್ಣ, ರಾಜೇಗೌಡ, ತಿಪ್ಪೇಗೌಡ, ಮಂಜಣ್ಣ, ರಾಜೇಗೌಡ, ರಮೇಶ್, ಸಂಘದ ಕಾರ್ಯದರ್ಶಿಗಳು, ಅಧ್ಯಕ್ಷರು, ನೀರುಗಂಟಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.