ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಗಂಡು ಚಿರತೆ ಸೆರೆ

Published : 23 ಆಗಸ್ಟ್ 2023, 6:33 IST
Last Updated : 23 ಆಗಸ್ಟ್ 2023, 6:33 IST
ಫಾಲೋ ಮಾಡಿ
Comments

ಹಿರೀಸಾವೆ (ಹಾಸನ): ಹೋಬಳಿಯ ಕಾವಲಬಾರೆ (ಮಾಚಬೂನಹಳ್ಳಿ) ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಗಂಡು ಚಿರತೆ ಸೆರೆ ಸಿಕ್ಕಿದೆ.

ಅರಣ್ಯ ಇಲಾಖೆಯವರು ಕಳೆದ ವಾರ ಬೋನ್ ಇರಿಸಿದ್ದರು. ಮಂಗಳವಾರ ರಾತ್ರಿ ಗ್ರಾಮ ಕುಮಾರ್ ಎಂಬುವವರ ಕುರಿಯನ್ನು ತಿಂದು ಅರ್ಧ ಭಾಗವನ್ನು ಅಲ್ಲಿಯೇ ಬಿಟ್ಟು ಹೋಗಿತ್ತು. ಗ್ರಾಮದ ಯುವಕರು ಉಳಿದ ಭಾಗವನ್ನು ಬೋನ್ ಒಳಗೆ ಹಾಕಿದ್ದರು. ಅದನ್ನು ತಿನ್ನಲು ಬಂದು ಬೋನ್‌ನಲ್ಲಿ ಸೆರೆಯಾಗಿದೆ. ಚನ್ನರಾಯಪಟ್ಟಣ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT