ಹಾಸನ: ಸರಿಯಾದ ಮಾಹಿತಿ ನೀಡದ ಹಾಗೂ ಕಾಮಗಾರಿ ವಿಳಂಬವಾಗಿರು ವುದಕ್ಕೆ ಕಾರಣ ಕೇಳಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿ ಅಧ್ಯಕ್ಷ ಡಾ. ವೈ.ಎ. ನಾರಾಯಣಸ್ವಾಮಿ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗಂಗಾಕಲ್ಯಾಣ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲುಸ್ವೀಕಾರ ಮತ್ತು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿಮಾತನಾಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2018–19ನೇ ಸಾಲಿನಲ್ಲಿ ಕೊರೆದಿರುವ167 ಕೊಳವೆ ಬಾವಿಗಳಲ್ಲಿ 47 ಕೊಳವೆ ಬಾವಿಗಳಿಗೆ ಇನ್ನೂ ಮೋಟರ್ ಅಳವಡಿಸಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆತೆಗೆದುಕೊಂಡರು.

ಸಭೆಗೆ ಸರಿಯಾದ ಮಾಹಿತಿ ನೀಡದ ಹಾಗೂ ಕಾಮಗಾರಿ ವಿಳಂಬ ಆಗಿರುವುದಕ್ಕೆ ಕಾರಣಕೇಳಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮೈಸೂರು ವಿಭಾಗದ ಉಪಪ್ರಧಾನ ವ್ಯವಸ್ಥಾಪಕಿಸಿ.ಭಾರತಿ ಹಾಗೂ ಜಿಲ್ಲಾ ವ್ಯವಸ್ಥಾಪಕಮನುಕುಮಾರ್ ಅವರಿಗೆ ನೋಟಿಸ್ಜಾರಿ ಮಾಡುವಂತೆನಿರ್ದೇಶನ ನೀಡಿದರು.

ಗಂಗಾ ಕಲ್ಯಾಣ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಿದರೆ ಸಾವಿರಾರುಎಕರೆ ಪ್ರದೇಶ ನೀರಾವರಿ ಆಗಲಿದೆ. ಮೂರು ವರ್ಷ ಕಳೆದರೂ ಕೊಳವೆ ಬಾವಿಗಳಿಗೆಮೋಟರ್ ಅಳವಡಿಸಿ, ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಈ ರೀತಿ ಮಾಡುವುದುಅಪರಾಧ ಮಾತ್ರವಲ್ಲದೆ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮಾಡಿದ ಅನ್ಯಾಯ ಎಂದು ಕಿಡಿಕಾರಿದರು.

ಒಂದು ತಿಂಗಳ ಒಳಗೆ 2018–19ನೇ ಸಾಲಿನಲ್ಲಿ ಬಾಕಿ ಇರುವ ಎಲ್ಲಾ ಕೊಳವೆಬಾವಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಮೋಟರ್ ಅಳವಡಿಕೆ ಮಾಡಬೇಕು ಎಂದುಗಡುವು ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮತನಾಡಿ, ಜಿಲ್ಲೆಯಲ್ಲಿ 61 ಸಾವಿರ ಪರಿಶಿಷ್ಟ ಜಾತಿಯ ರೈತರಿದ್ದು, ಎಲ್ಲಾ ಅಭಿವೃದ್ಧಿ ನಿಗಮಗಳಿಂದ ವಾರ್ಷಿಕ ಅಂದಾಜು 5 ಸಾವಿರ ಕೊಳವೆಬಾವಿಗಳನ್ನಷ್ಟೇ ನೀಡುತ್ತಿದ್ದು, ಇದು ಸಾಕಾಗುತ್ತಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಸ್ವಾಮಿ, ಜಿಲ್ಲೆಯಲ್ಲಿ ಎಲ್ಲಾ ನಿಗಮಗಳಿಂದ ಅಂದಾಜು1,500 ಕೊಳವೆ ಬಾವಿಗಳಿಗೆ ಮೋಟರ್ ಅಳವಡಿಕೆ ಮಾಡಿಲ್ಲ. 300 ರಿಂದ400 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ರೀತಿಯಾದರೆ ಸರ್ಕಾರದಮಹತ್ವ ಪೂರ್ಣ ಯೋಜನೆ ಹೇಗೆ ಸಾಕಾರವಾಗುತ್ತದೆ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಒಂದೇ ದಿನದಲ್ಲಿ ಕೊಳವೆ ಬಾವಿ ಕೊರೆಸಿ, ವಿದ್ಯುತ್ಸಂಪರ್ಕ ಕಲ್ಪಿಸಿ, ಅಂದೇ ಮೋಟರ್ ಅಳವಡಿಕೆ ಮಾಡಿರುವ ಬಿಲ್ ನೀಡಲಾಗಿದೆ.ಮತ್ತೊಂದು ನಿಗಮ
ದಲ್ಲಿ ₹2.5 ಲಕ್ಷ ವೆಚ್ಚದ ಒಂದೇ ಕೊಳವೆ ಬಾವಿಗೆ ₹ 5ಲಕ್ಷದ ಬಿಲ್ ಮಾಡಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಶಾಸಕ ಎಚ್.ಡಿ ರೇವಣ್ಣಮಾತನಾಡಿ, 2018-19ನೇಸಾಲಿನ ಕೊಳವೆ ಬಾವಿ ಯೋಜನೆ ಇನ್ನೂ ಟೆಂಡರ್ ಪ್ರಕ್ರಿಯೆ ಹಂತದಲ್ಲಿ ಇರುವುದು ನಿಗಮಗಳ ವಿಳಂಬ ಧೋರಣೆ ತೋರುತ್ತಿದೆ. ಹಾಗಾಗಿ ನಿಯಮಗಳನ್ನು ಸರಳೀಕರಣಗೊಳಿಸಿ, ಶೋಷಿತರು, ಬಡವರು, ಹಿಂದುಳಿದ ವರ್ಗಗಳ ಜನರಿಗೆ ಕಾಲಮಿತಿಯೊಳಗೆ ಸೌಲಭ್ಯ ಒದಗಿಸಬೇಕು.ಅನುಷ್ಠಾನ ಏಜೆನ್ಸಿಗಳ ನಿರ್ಲಕ್ಷ್ಯ ತೋರಿದರೆ ಕಪ್ಪು ಪಟ್ಟಿಗೆ ಸೇರಿಸಿ ಎಂದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಎಸ್.ರವಿ, ಎಂ.ಎ.ಗೋಪಾಲಸ್ವಾಮಿ, ಬಿ.ಎಂ ಫಾರೂಖ್, ಕೆ. ಪ್ರತಾಪ್ ಸಿಂಹ ನಾಯಕ್, ಶಾಸಕರಾದಎಚ್.ಡಿ. ರೇವಣ್ಣ, ಕೆ.ಎಸ್. ಲಿಂಗೇಶ್, ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.