ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಪಠ್ಯ ಕೇಸರೀಕರಣ: ಮಹೇಶ್ ಕಿಡಿ

Last Updated 26 ಮೇ 2022, 15:39 IST
ಅಕ್ಷರ ಗಾತ್ರ

ಹಾಸನ: ‘ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳಲ್ಲಿ ಕೇಸರೀಕರಣ ಮಾಡುವ ಹುನ್ನಾರಕ್ಕೆಕೈ ಹಾಕಿದೆ’ ಎಂದು ಕೆಪಿಸಿಸಿ ಸದಸ್ಯ ಎಚ್.ಕೆ ಮಹೇಶ್ ಆರೋಪಿಸಿದರು.

‘ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಸಮಾಜಕ್ಕೆ ಬೇಡವಾದ ಕೆಲಸ ಮಾಡಲಾಗುತ್ತಿದೆ.ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಮಿತಿಯಲ್ಲಿ ಇತರೆ ಜಾತಿಯಅಥವಾ ಧರ್ಮದ ಒಬ್ಬರೇ ಸದಸ್ಯರು ಇಲ್ಲದೆ ಇರುವುದು ಹಿಡನ್ ಅಜೆಂಡಾಕ್ಕೆ ಹಿಡಿದಕೈಗನ್ನಡಿ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಚಕ್ರವರ್ತಿ ಸೂಲಿಬೆಲೆ ವಿಷಯವನ್ನು ಪಠ್ಯಪುಸ್ತಕದಲ್ಲಿ ಸೇರಿಸಿದರೆ ಮುಂದೆ ಉನ್ನತಹುದ್ದೆಗೆ ಹೋಗಬೇಕಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಿಜೆಪಿ ಪರ ಪ್ರಚಾರ ಮಾಡಿದ ವ್ಯಕ್ತಿಯ ವಿಷಯವನ್ನು ಪಠ್ಯಕ್ಕೆ ಸೇರಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ನೈತಿಕ ಶಿಕ್ಷಣ ನೀಡುವ ಬದಲಾಗಿ ಕೇಸರೀಕರಣ ಗೊಳಿಸುವಹುನ್ನಾರ ಮಾಡಿದ್ದಾರೆ. ಪಠ್ಯದ ವಿಚಾರದಲ್ಲಿಯೂ ರಾಜಕೀಯ ಮಾಡಲು ಮುಂದಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ’ ಎಂದು ಕಳವಳವ್ಯಕ್ತಪಡಿಸಿದರು.

‘ಡಾ.ರಾಜ್‍ಕುಮಾರ್ ಸೇರಿದಂತೆ ಕರ್ನಾಟಕದಲ್ಲಿ ಹುಟ್ಟಿ ಸಾಧನೆ ಮಾಡಿದ ಅನೇಕಮಹನೀಯರು ಇದ್ದು, ಅವರ ಬಗ್ಗೆ ಪಠ್ಯದಲ್ಲಿ ಸೇರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದರ ಬದಲಾಗಿ ಸುಳ್ಳುಕೋರರ ಬಗ್ಗೆ ಅಥವಾ ಒಂದು ಸಿದ್ಧಾಂತದಪರವಾಗಿರುವವರ ಬರವಣಿಗೆಯನ್ನು ಪಠ್ಯದಲ್ಲಿ ಸೇರಿಸುವುದು ಸೂಕ್ತವಲ್ಲ’ ಎಂದರು.

ವಕೀಲ ಪ್ರಸನ್ನ ಮಾತನಾಡಿ, ‘ಪಠ್ಯದ ಮರುಮುದ್ರಣದಿಂದ ಸುಮಾರು ಎರಡೂವರೆಸಾವಿರ ಕೋಟಿ ರೂಪಾಯಿ ಸರ್ಕಾರಕ್ಕೆ ಹೊರೆ ಬೀಳಲಿದೆ. ಈಗಾಗಲೇ ಕೋವಿಡ್ ಸಂಕಷ್ಟದ ನಡುವೆಯೂ ಸರ್ಕಾರ ಸಾರ್ವಜನಿಕರ ಹಣವನ್ನು ಇನ್ನೊಂದು ರೀತಿಯಲ್ಲಿ ಲೂಟಿ ಮಾಡಲು ಮುಂದಾಗಿರುವುದು ಖಂಡನೀಯ’ ಎಂದರು.

ವಕೀಲರಾದ ಮಂಜುನಾಥ್, ಗಂಗಾಧರ್, ನಾಗರಾಜ್, ರಂಗಸ್ವಾಮಿ, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT