ಹಾಸನ: ಜಿಲ್ಲೆಯ ಸ್ಥಳಿಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಪಂಚಾಯಿತಿಯ ಎರಡು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಾಗುವುದು ಎಂದು ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ತಾಲ್ಲೂಕಿನ ಮುತ್ತಿಗೆಹಿರಿಹಳ್ಳಿ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ವಾರ ಪ್ರವಾಸ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರುವ ಅನುದಾನವನ್ನು ಬಳಿಸಿಕೊಂಡು ಸ್ಥಳಿಯ ಸಮಸ್ಯೆಗಳನ್ನು ಬಗೆಹರಿಸ ಲಾಗುವುದು. ಮುತ್ತಿಗೆಹಿರಿಹಳ್ಳಿ ಗ್ರಾಮಕ್ಕೆ ಬೇಕಾಗಿರುವ ಜೂನಿಯರ್ ಕಾಲೇಜು, ಡೇರಿ ಕಟ್ಟಡ ಹಾಗೂ ಸೊಸೈಟಿ ಕಟ್ಟಡಗಳ ಅಗತ್ಯವಿದ್ದು, ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದ ಅವರು, ತಾವು ಈ ಕಾರ್ಯ ಕ್ರಮದಲ್ಲಿ ಗ್ರಾಮದ ಅಳಿಯನಾಗಿ ಸಮಾರಂಭದಲ್ಲಿ ಭಾಗವಹಿಸಿ ರುವುದಾಗಿ ಅವರು ಹೇಳಿದರು.

ಇದಕ್ಕೂ ಮುನ್ನ ಅವರನ್ನು ಪೂರ್ಣಕುಂಭದ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು. ಶಾಲೆಯಲ್ಲಿ ವಿದ್ಯಾಭ್ಯಾಸದ ಮಾಡಿದ ತಮ್ಮ ಪತ್ನಿ ಚನ್ನಮ್ಮ ಹಾಗೂ ಇತರರು ಸೇರಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, “ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಾಲ್ಯದಲ್ಲಿ ಈ ಗ್ರಾಮದಲ್ಲಿ ಕಳೆದ ಅನೇಕ ನೆನಪುಗಳನ್ನು ಈಗಲೂ ನೆನಪಿಸಿಕೊಳ್ಳುತ್ತಿರುತ್ತಾರೆ. ಅವರು ಜಿಲ್ಲೆಯಿಂದ ಹೊರಗುಳಿದಿದ್ದರು, ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಮತ್ತು ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದಾರೆ” ಎಂದರು.

ಕಣ್ಣೀರಿಟ್ಟ ರೇವಣ್ಣ

ತಮ್ಮ ಮಾವ ಪುಟ್ಟಸ್ವಾಮಿಗೌಡ ಅವರನ್ನು ನೆನಪಿಸಿಕೊಂಡು ಶಾಸಕ ಎಚ್.ಡಿ.ರೇವಣ್ಣ ವೇದಿಕೆಯಲ್ಲಿಯೇ ಕಣ್ಣಿರಿಟ್ಟ ಪ್ರಸಂಗ ನಡೆಯಿತು.ಶಾಲೆಯ ಹಿರಿಯ ವಿದ್ಯಾರ್ಥಿ ಚನ್ನಮ್ಮ ದೇವೇಗೌಡ, ಭವಾನಿ ರೇವಣ್ಣ, ಶಾಸಕರಾದ ಎಚ್.ಎಸ್. ಪ್ರಕಾಶ್, ಪಟೇಲ್ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಚಂದ್ರೇಗೌಡ, ಉಪಾಧ್ಯಕ್ಷೆ ಪಾರ್ವತಮ್ಮ, ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಮಾಜಿ ಶಾಸಕ ಬಿ.ವಿ. ಕರೀಗೌಡ, ಕೆ.ಎಂ. ರಾಜೇಗೌಡ, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ಜಿ.ಪಂ. ಸದಸ್ಯರಾದ ಶಾಂತಮ್ಮ ಅಣ್ಣಪ್ಪ, ಎಚ್.ಎನ್. ದೇವೇಗೌಡ, ಸಾರ್ವಜನಿಕ ಶಿಕ್ಷಣ ಇಲಾಕೆ ಉಪನಿರ್ದೇಶಕ ಎ.ಟಿ. ಚಾಮರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಕಂಚೇಗೌಡ, ತಾ.ಪಂ. ಸದಸ್ಯರಾದ ದೇವೇಗೌಡ, ರತ್ನಮ್ಮ ಹನುಮೇಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.