ಹಾಸನ: `ಇಂದಿನ ಮಾನವೀಯ ವಿಜ್ಞಾನಗಳಲ್ಲಿ ಅರ್ಥಶಾಸ್ತ್ರ ಶ್ರೇಷ್ಠವಾದುದು~ ಎಂದು ಮೈಸೂರಿನ ಮಾನಸ ಗಂಗೋತ್ರಿ ಸಹಕಾರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಹೇಶ್ ನುಡಿದರು.

ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆರ್ಥಿಕ ಚಿಂತಕರ ವೇದಿಕೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅರ್ಥಶಾಸ್ತ್ರದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದ ಬಳಕೆ~ ವಿಷಯದ ಉಪನ್ಯಾಸ ನೀಡಿದರು.

ಸಾಮಾನ್ಯ ವಿಜ್ಞಾನವಾದರೆ ಅಂಶಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಬಹುದು ಅದು ಹೆಚ್ಚು ನಿಖರವಾಗಿರತ್ತದೆ. ಆದರೆ ಮಾನವೀಯ ವಿಜ್ಞಾನದಲ್ಲಿ ಇದು ಅಸಾಧ್ಯ. ಈಚಿನ ದಿನದಲ್ಲಿ ಅರ್ಥಶಾಸ್ತ್ರದಲ್ಲಿ ಗಣಿತ ಹಾಗೂ ಸಂಖ್ಯಾ ಶಾಸ್ತ್ರವನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು ಆರ್ಥಿಕ ವಿಚಾರಗಳನ್ನೂ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕಾರಣದಿಂದಲೇ ಇದು ಶ್ರೇಷ್ಠವೆನಿಸುತ್ತದೆ~ ಎಂದರು.

ಪ್ರಾಂಶುಪಾಲ ಪ್ರೊ.ಎಂ.ಕೆ. ಉಮಾನಾಥ್ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನೇ.ತಿ. ಸೋಮಶೇಖರ್, ಆರ್ಥಿಕ ಚಿಂತಕರ ವೇದಿಕೆಯ ಅಧ್ಯಕ್ಷ ಎಂ.ಎನ್. ಲೋಕೇಶ್ ಉಪನ್ಯಾಸಕ ಎಸ್.ಡಿ. ದಿಲೀಪ್ ಕುಮಾರ್ ಎಚ್.ಎಸ್. ಮಂಜು, ಪ್ರದೀಪ್ ಉಪಸ್ಥಿತರಿದ್ದರು. ದಿವ್ಯಾ ನಿರೂಪಿಸಿದರು, ಮಹಾದೇವ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.