ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 28 ಮಂದಿಗೆ ಕೋವಿಡ್‌

ಪಿಗ್ಮಿ ಏಜೆಂಟ್‌ನಿಂದ ಐವರಿಗೆ ಸೋಂಕು: ಜಿಲ್ಲೆಯಲ್ಲಿ 151ಕ್ಕೆ ಏರಿದ ಪ್ರಕರಣಗಳ ಸಂಖ್ಯೆ
Last Updated 4 ಜುಲೈ 2020, 15:15 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 28 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 151 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಈ ಪೈಕಿ 37 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, 112 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.
ಇಂದು ಪೊಲೀಸ್ ಕಾನ್‌ಸ್ಟೆಬಲ್‌, ಇಬ್ಬರು ಆಶಾ ಕಾರ್ಯಕರ್ತೆಯರು, ಮೂವರು ಆರೋಗ್ಯ ಇಲಾಖೆ ಸಿಬ್ಬಂದಿ, ಬ್ಯೂಟಿಷಿಯನ್ ಹಾಗೂ ಶಿಗ್ಗಾವಿಯ ಪಿಗ್ಮಿ ಏಜೆಂಟ್ ಪಿ-9412ರ ಪ್ರಾಥಮಿಕ ಸಂಪರ್ಕದಿಂದ ಐವರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ 15 ಜನರಿಗೆ ಸೋಂಕು ದೃಢಪಟ್ಟಿದೆ.

ಹಾನಗಲ್ ತಾಲ್ಲೂಕಿನ ಶಿವಪುರದ ಆರೋಗ್ಯ ಇಲಾಖೆ ಸಿಬ್ಬಂದಿ 24 ವರ್ಷದ ಯುವಕ (ಪಿ-124), ಹಾನಗಲ್‍ನ 22 ವರ್ಷದ ಯುವಕ (ಪಿ-125), ಕಲ್ಕಹಕ್ಕಲನ ಆರೋಗ್ಯ ಇಲಾಖೆ ಸಿಬ್ಬಂದಿ 31 ವರ್ಷದ ಮಹಿಳೆ ( ಪಿ-126), 41 ವರ್ಷದ ಆಶಾ ಕಾರ್ಯಕರ್ತೆ ( ಪಿ-127), ರಾಣೆಬೆನ್ನೂರ ತಾಲ್ಲೂಕಿನ 66 ವರ್ಷದ ವೃದ್ಧೆ(ಪಿ-128) ಹಾಗೂ 28 ವರ್ಷದ ಮಹಿಳೆ(ಪಿ-129), ಶಿಗ್ಗಾಂವ ತಾಲ್ಲೂಕಿನ 45 ವರ್ಷದ ಆಶಾ ಕಾರ್ಯಕರ್ತೆ (ಪಿ-130), 34 ವರ್ಷದ ಯುವಕ (ಪಿ-131) ಪಿ-9412 ಸಂಪರ್ಕಿತ, 21 ವರ್ಷದ ಯುವಕ (ಪಿ-132) (ಪಿ-9412 ಪ್ರಾಥಮಿಕ ಸಂಪರ್ಕ), 56 ವರ್ಷದ ಪುರುಷ (ಪಿ-133), 64 ವರ್ಷದ ವೃದ್ಧ (ಪಿ-134), 27 ವರ್ಷದ ಯುವಕ (ಪಿ-135), 42 ವರ್ಷದ ಪುರುಷ (ಪಿ-136) ಪಿ-9412 ಸಂಪರ್ಕಿತ, 25 ವರ್ಷದ ಯುವತಿ (ಪಿ-137) ಪಿ-9412 ಸಂಪರ್ಕಿತ ಹಾಗೂ 4 ವರ್ಷದ ಗಂಡು ಮಗುವಿಗೂ (ಪಿ-138) ಸೋಂಕು ದೃಢಪಟ್ಟಿದೆ.

ಪಿ-9412 ಸಂಪರ್ಕಿತ, ಹಾನಗಲ್ ತಾಲ್ಲೂಕು 60 ವರ್ಷದ ವೃದ್ಧೆ (ಪಿ-139), 29 ವರ್ಷದ ಬ್ಯೂಟಿಷಿಯನ್ ಮಹಿಳೆ (ಪಿ-140), ಹಾವೇರಿ ನಾಗೇಂದ್ರನಮಟ್ಟಿಯ 24 ವರ್ಷದ ಯುವತಿ (ಪಿ-141) ಹಾಗೂ ಪೊಲೀಸ್ ಇಲಾಖೆಯ 50 ವರ್ಷದ ಪುರುಷ (ಪಿ-142), ಹಾನಗಲ್ ತಾಲ್ಲೂಕಿನ 60 ವರ್ಷದ ಮಹಿಳೆ (ಪಿ-143), 56 ವರ್ಷದ ಮಹಿಳೆ(ಪಿ-144), ರಾಣೆಬೆನ್ನೂರ ತಾಲ್ಲೂಕು 46 ವರ್ಷದ ಪುರುಷ (ಪಿ-145), ಹಾನಗಲ್ ತಾಲ್ಲೂಕು 27 ವರ್ಷದ ಯುವತಿ (ಪಿ-146), ಶಿಗ್ಗಾವಿ ತಾಲ್ಲೂಕು 43 ವರ್ಷದ ಪುರುಷ (ಪಿ-147), ಹಾನಗಲ್ ತಾಲ್ಲೂಕಿನ 38 ವರ್ಷದ ಮಹಿಳೆ (ಪಿ-148), ಆರೋಗ್ಯ ಇಲಾಖೆಯ ಸಿಬ್ಬಂದಿ 20 ವರ್ಷದ ಯುವಕ (ಪಿ-149), ರಾಣೇಬೆನ್ನೂರ ತಾಲ್ಲೂಕಿನ 29 ವರ್ಷದ ಮಹಿಳೆ (ಪಿ-150) ಹಾಗೂ ಹಿರೇಕೆರೂರು ತಾಲ್ಲೂಕಿನ 35 ವರ್ಷದ ಮಹಿಳೆಗೆ (ಪಿ-151) ಸೋಂಕು ದೃಢಗೊಂಡಿದೆ.

ಹಾನಗಲ್‍ನ ಶಿವಪುರದ 38 ವರ್ಷದ ಗೃಹಿಣಿ ತನ್ನ ಮಗನೊಂದಿಗೆ ಜುಲೈ 1ರಂದು ಜ್ವರ ಸಂಬಂಧವಾಗಿ ಹಾನಗಲ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ತಾಯಿ-ಮಗನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜುಲೈ 3ರಂದು ಕೋವಿಡ್ ಪಾಸಿಟಿವ್ ಬಂದಿರುತ್ತದೆ. ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದಂತೆ ಸದರಿ ಸೋಂಕಿತರ ನಿವಾಸದ 100 ಮೀಟರ್‌ ಪ್ರದೇಶವನ್ನು ‘ಕಂಟೈನ್‍ಮೆಂಟ್ ಜೋನ್’ ಆಗಿ ಪರಿವರ್ತಿಸಲಾಗಿದೆ ಹಾಗೂ 200 ಪ್ರದೇಶ ‘ಬಫರ್ ಜೋನ್’ ಆಗಿ ಪರಿಗಣಿಸಲಾಗಿದೆ.

ಇಬ್ಬರು ಗುಣಮುಖ- ಬಿಡುಗಡೆ:

ಜೂನ್ 23ರಂದು ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿ,ಗುಣಮುಖರಾದ ಕಾರಣ ಶನಿವಾರ ರಾಣೆಬೆನ್ನೂರ ನಗರದ ಬಟ್ಟೆ ವ್ಯಾಪಾರಿ 38 ವರ್ಷದ ಪುರುಷ (ಪಿ-9411) ಹಾಗೂ ಶಿಗ್ಗಾವಿ ಪಟ್ಟಣದ ಪಿಗ್ಮಿ ಏಜೆಂಟ್ 37 ವರ್ಷದ (ಪಿ-9412) ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT