ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಲವ್ ಜಿಹಾದ್’ ಸಹಾಯವಾಣಿಗೆ 4 ದಿನದಲ್ಲಿ 300 ಕರೆ: ಪ್ರಮೋದ್ ಮುತಾಲಿಕ್

Published 9 ಜುಲೈ 2024, 16:04 IST
Last Updated 9 ಜುಲೈ 2024, 16:04 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ): ‘ಲವ್ ಜಿಹಾದ್ ಕುರಿತಂತೆ ಶ್ರೀರಾಮ ಸೇನೆ ಸಂಘಟನೆಯಿಂದ ಸಹಾಯವಾಣಿ ಆರಂಭಿಸಿದ ತೆರೆದ ನಾಲ್ಕೇ ದಿನದಲ್ಲಿ 300 ಕರೆಗಳು ಬಂದಿವೆ. ಅವುಗಳಲ್ಲಿ 70 ಕರೆಗಳು ಲವ್ ಜಿಹಾದ್‌ಗೆ ಸಂಬಂಧಿಸಿದ ಕುಟುಂಬದ ಕರೆಗಳಾಗಿದ್ದವು’ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

‘ಒಂದೇ ಸಹಾಯವಾಣಿ ಸಂಖ್ಯೆಯು ರಾಜ್ಯದ 4 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿದೆ. ಲವ್ ಜಿಹಾದ್‌ಗೆ ಸಂಬಂಧಿಸಿದಂತೆ ಒಂದು ಕರೆ ಬಂದರೆ ಐವರ ತಂಡ ಅದನ್ನು ಕೌನ್ಸೆಲಿಂಗ್  ಮಾಡಿ ಎಲ್ಲಿಂದ ಕರೆ ಬಂದಿದೆ ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳುತ್ತಾರೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಹಾವೇರಿ ಜಿಲ್ಲೆಯಲ್ಲೂ ಬಹಳ ವೇಗವಾಗಿ ಲವ್‌ ಜಿಹಾದ್ ನಡೆಯುತ್ತಿದೆ. ಆದ್ದರಿಂದ ರಾಜ್ಯದಲ್ಲಿ 100 ಜಾಗಗಳಲ್ಲಿ ತ್ರಿಶೂಲದೀಕ್ಷಾ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT