ಮಂಗಳವಾರ, ಆಗಸ್ಟ್ 3, 2021
20 °C
ಜಿಲ್ಲೆಯಲ್ಲಿ 212ಕ್ಕೆ ಏರಿಕೆಯಾದ ಪ್ರಕರಣಗಳು: ಎಂಟು ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಒಂದೇ ದಿನ 31 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲೆಯಲ್ಲಿ ಬುಧವಾರ 31 ಕೋವಿಡ್ ಸೋಂಕು ದೃಢಪಟ್ಟಿದೆ. ಎಂಟು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದ ಶವ ಸಂಸ್ಕಾರದದಲ್ಲಿ ಭಾಗಿಯಾದ ಹಿರೇಕೆರೂರಿನ ರಾಮತೀರ್ಥದ 15 ಜನರಿಗೆ, ಹಾನಗಲ್ ತಾಲ್ಲೂಕಿನ ಅಕ್ಕಿಆಲೂರ ಹಾಗೂ ಹಿರೇಕೆರೂರಿನ ಸರ್ಕಾರಿ ಆಸ್ಪತೆ ಲ್ಯಾಬ್ ಟೆಕ್ನಿಷಿಯನ್, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಹೆಸ್ಕಾಂ ಕಚೇರಿಯಲ್ಲಿ ಲೈನ್‌ಮನ್‌ ಸೇರಿದಂತೆ 31 ಜನರಿಗೆ ಕೋವಿಡ್ ದೃಢಪಟ್ಟಿದೆ. ಹಿರೇಕೆರೂರು ತಾಲ್ಲೂಕಿನಲ್ಲಿ 16 ಪ್ರಕರಣ, ಸವಣೂರು, ಹಾನಗಲ್, ರಾಣೆಬೆನ್ನೂರಿನಲ್ಲಿ ತಲಾ 3 ಪ್ರಕರಣ ಹಾವೇರಿ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ತಲಾ ಒಂದು ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 212 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. 66 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. 144 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಹಿರೇಕೆರೂರು ತಾಲ್ಲೂಕು ರಾಮತೀರ್ಥ ಗ್ರಾಮದ 15 ವರ್ಷದ ಬಾಲಕಿ (ಎಚ್‌ವಿಆರ್‌ -182), 11 ವರ್ಷದ ಬಾಲಕಿ (ಎಚ್‌ವಿಆರ್‌-183), 14 ವರ್ಷದ ಬಾಲಕ (ಎಚ್‌ವಿಆರ್‌ -185), 50 ವರ್ಷದ ಮಹಿಳೆ (ಎಚ್‌ವಿಆರ್‌ -187), 75 ವರ್ಷದ ಪುರುಷ (ಎಚ್‌ವಿಆರ್‌ -188), 17 ವರ್ಷದ ಬಾಲಕಿ (ಎಚ್‌ವಿಆರ್‌ -193), 29 ವರ್ಷದ ಪುರುಷ (ಎಚ್‌ವಿಆರ್‌ -194), 35 ವರ್ಷದ ಪುರುಷ (ಎಚ್‌ವಿಆರ್‌ -195), 16 ವರ್ಷದ ಬಾಲಕಿ (ಎಚ್‌ವಿಆರ್‌ -197) ಹಾಗೂ ಮಾಸೂರ ಗ್ರಾಮದ ಪಂಚಾಯಿತಿ ಹತ್ತಿರದ 11 ವರ್ಷದ ಬಾಲಕಿ (ಎಚ್‌ವಿಆರ್‌ -184), ನಾಲ್ಕು ವರ್ಷದ ಬಾಲಕ (ಎಚ್‌ವಿಆರ್‌ -191), 15 ವರ್ಷ ಬಾಲಕಿ (ಎಚ್‌ವಿಆರ್‌ -192), 50 ವರ್ಷದ ಮಹಿಳೆ (ಎಚ್‌ವಿಆರ್‌ -186), 35 ವರ್ಷದ ಪುರುಷ (ಎಚ್‌ವಿಆರ್‌ -196) ಹಾಗೂ ಹೊಸ ವೀರಾಪುರ ಗ್ರಾಮದ 37 ವರ್ಷದ ಮಹಿಳೆಗೆ (ಎಚ್‌ವಿಆರ್‌ -190) ಸೋಂಕು ದೃಢಪಟ್ಟಿದೆ.

ಮಾಸೂರ, ರಾಮತೀರ್ಥ ಹಾಗೂ ಹೊಸ ವೀರಾಪುರ ಗ್ರಾಮದ ವಾಸಿಸುತ್ತಿದ್ದ ಸೋಂಕಿತರ ನಿವಾಸವಿರುವ 100 ಮೀಟರ್ ಪ್ರದೇಶ ಕಂಟೈನಮೆಂಟ್ ಜೋನ್ ಹಾಗೂ ಮೂರು ಗ್ರಾಮಗಳ 200 ಮೀ.ಪ್ರದೇಶ ಬಫರ್ ಜೋನ್ ಆಗಿ ಘೋಷಿಸಲಾಗಿದೆ.
ಹಿರೇಕೆರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ 40 ವರ್ಷದ ಮಹಿಳೆ (ಎಚ್‌ವಿಆರ್‌ -189) ಐ.ಎಲ್.ಐ. ಲಕ್ಷಣಗಳ ಕಾರಣ ಜುಲೈ 1ರಂದು ಸ್ವಯಂ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದು, ಜುಲೈ 6ರಂದು ಪಾಸಿಟಿವ್ ದೃಢಪಟ್ಟಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲ್ಲೂಕು ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಎಂಟು ಜನರು ಗುಣಮುಖ: ಪಿ-12112, ಪಿ-12115, ಪಿ-12117, ಪಿ-12119, ಪಿ-19928, ಪಿ-19945, ಪಿ-19925, ಪಿ-19927 ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು