ಸಾಂಸ್ಕೃತಿಕ ಪರಂಪರೆ ರಕ್ಷಣೆ ಅಗತ್ಯ: ಶಾಂತನಗೌಡ ಹಾದಿಮನಿ

7

ಸಾಂಸ್ಕೃತಿಕ ಪರಂಪರೆ ರಕ್ಷಣೆ ಅಗತ್ಯ: ಶಾಂತನಗೌಡ ಹಾದಿಮನಿ

Published:
Updated:
Prajavani

ಹಾವೇರಿ: ಇಂದಿನ ಯುವ ಜನಾಂಗಕ್ಕೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ತಿಳಿವಳಿಕೆ ಹಾಗೂ ರಕ್ಷಣೆ ಅಗತ್ಯವಾಗಿದೆ ಎಂದು ಎಂ.ಎ.ಎಸ್‌.ಸಿ ಮಹಾವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಶಾಂತನಗೌಡ ಹಾದಿಮನಿ ಹೇಳಿದರು.

ನಗರದ ಜಿ.ಎಚ್‌.ಕಾಲೇಜು ಆವರಣದಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ ಪರಂಪರೆ ಅಂತರ ಮಹಾವಿದ್ಯಾಲಯಗಳ ಕನ್ನಡ ಭಾಷಣ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ಎಲ್‌.ಇ. ಬಿಸಿಎ ಮಹಾವಿದ್ಯಾಲಯದ ಕಿರಣಕುಮಾರ ದೊಡ್ಡಮನಿ (ಪ್ರಥಮ) ₹3ಸಾವಿರ, ಹಂಸಭಾವಿ ಮಹಾವಿದ್ಯಾಲಯದ ಅಶ್ವಿನಿ ಕಡಗಿ (ದ್ವಿತೀಯ) ₹2,500, ಶಿವಲಿಂಗೇಶ್ವರ ಮಹಾವಿದ್ಯಾಲಯದ ಪ್ರಿಯಾಂಕಾ ಪಾಟೀಲ ಹಾಗೂ ಜಿ.ಎಚ್.ಕಾಲೇಜಿನ ಲಿಂಗರಾಜ ಕುರುಬರ (ತೃತೀಯ) ₹1ಸಾವಿರ ಬಹುಮಾನ ಪಡೆದರು. ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಪ್ರಾಚಾರ್ಯ ಡಾ. ಎಂ.ಎಸ್.ಯರಗೊಪ್ಪ, ಜಿಲ್ಲಾ ಪರಂಪರೆ ಕೂಟದ ಸಂಚಾಲಕ ಡಾ.ಶಿವಯೋಗಿ ಕೋರಿಶೆಟ್ಟರ, ಪ್ರೊ. ಹುಣಸಿಕಟ್ಟಿಮಠ, ಪ್ರೊ.ನಾಗರಾಜ ಮುಚ್ಚಟ್ಟಿ, ಎಂ.ಜಿ.ತೇಲಕರ, ಪ್ರೊ.ಎಂ.ಎಸ್.ಬೆಂಡಿಗೇರಿ, ಡಾ. ಸಂಜೀವ ನಾಯಕ, ಪಲ್ಲವಿ, ಕವಿತಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !