ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಸಲು ಒಪ್ಪಿದವರಿಗೆ ಮಾತ್ರ ಪ್ರವೇಶ: ಧುಂಡಶಿ ಗ್ರಾಮಸ್ಥರು

Published 23 ಏಪ್ರಿಲ್ 2023, 6:55 IST
Last Updated 23 ಏಪ್ರಿಲ್ 2023, 6:55 IST
ಅಕ್ಷರ ಗಾತ್ರ

ತಡಸ (ಧುಂಡಶಿ): ಗ್ರಾಮದ ಭವಿಷ್ಯ ಬದಲಿಸೋಣ, ಕಾಲವು ಬದಲಾಗುತ್ತಿದೆ ಗ್ರಾಮದ ವಾಸ್ತವತೆಯನ್ನು ಬದಲಾಯಿಸಿ ಉತ್ತಮ ಸಮಾಜ ನಿರ್ಮಿಸುವ ಕಾರ್ಯ ಮಾಡೋಣ ಎಂದು ಗ್ರಾಮದ ಯುವಕ ಪಾರಿಶ್ವನಾಥ ಬಾಳಂಬಿಡ ಹೇಳಿದರು.

ಧುಂಡಶಿ ಗ್ರಾಮದ ಶನಿವಾರ ನಡೆದ ‘ಅವಶ್ಯ ಇರುವ ಸೇವೆಗಳ ಶಾಸಕರಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷಗಳಲ್ಲಿ ಈಡೇರಿಸುವ ಭರವಸೆ ಕೊಟ್ಟು ಗ್ರಾಮದ ಒಳಗೆ ಪ್ರವೇಶಿಸುವ ಯುವಕರ ದೃಢ ನಿರ್ಧಾರ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧುಂಡಶಿ ಗ್ರಾಮದ ಅವಶ್ಯ ಇರುವ ಸೇವೆಗಳಾದ ಪಿಯು ಕಾಲೇಜು, ಹೊಸ ಬಸ್ ನಿಲ್ದಾಣ, ಗ್ರಂಥಾಲಯ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಸೇವೆ, ಶರೀಫ ಭವನ, ಕೆರೆಗಳಿಗೆ ನೀರು ನಿರ್ವಹಣೆ, ರುದ್ರ ಭೂಮಿಗೆ ಮೂಲ ಸೌಕರ್ಯ ಕಲ್ಪಿಸುವುದು, ಆಟದ ಮೈದಾನ, ಶುದ್ಧ ನೀರಿನ ಘಟಕ ದುರಸ್ತಿಗೊಳಿಸುವುದು, ಸರ್ಕಾರಿ ಇಲಾಖೆಗಳ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಬೇಕು, ಗ್ರಾಮ ಮಟ್ಟದ ಉಗ್ರಾಣ ನಿರ್ಮಿಸಿಕೊಡುವ ಶಾಸಕರು ಈ ಗ್ರಾಮಕ್ಕೆ ಪ್ರವೇಶಿಸಬೇಕು ಎಂಬ ನಿಯಮವಿರುವ ಬಿತ್ತಿ ಪತ್ರವನ್ನು ಗ್ರಾಮದ ಪ್ರಮುಖ ಗ್ರಾಮಗಲ್ಲಿ ಬ್ಯಾನರ್‌ ಮಾಡಿಸಿ ಹಾಕಿಸಿದ್ದಾರೆ.

ಪ್ರಚಾರಕ್ಕೆ ಬರುವ ಅಭ್ಯರ್ಥಿಗಳು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರೆ ಮಾತ್ರ ಮತ ಚಲಾಯಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

‌ಗ್ರಾಮದ ಯುವಕರಾದ ವಿನಾಯಕ ಕಲಕನಗೌಡ್ರ, ಕುಮಾರ ಅರಟಾಳ, ನಾಗರಾಜ ಗೊಳಪ್ಪನವರ, ವಿನಾಯಕ ಕೌಡಿ, ಅರಿಹಂತ ಸತ್ತೂರ, ಪ್ರದೀಪ ಮಾದರ, ಚಿದಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT