ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಜನೆಯ ದೇವಸ್ಥಾನದ ಸೇವಾರ್ಥಿ ಮೇಲೆ ಮುಸ್ಲಿಂ ಯುವಕ ಹಲ್ಲೆ

Published 4 ಆಗಸ್ಟ್ 2023, 15:36 IST
Last Updated 4 ಆಗಸ್ಟ್ 2023, 15:36 IST
ಅಕ್ಷರ ಗಾತ್ರ

ಗುತ್ತಲ: ಆಂಜನೇಯ ದೇವಸ್ಥಾನದ ಸೇವಾರ್ಥಿ ಮೇಲೆ ಮುಸ್ಲಿಂ ಯುವಕ ಹಲ್ಲೆ ಮಾಡಿದ ಘಟನೆ ಹಾವೇರಿ ತಾಲ್ಲೂಕಿನ ಹಂದಿಗನೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ರವಿ ದಿಡಗೂರ ಎನ್ನುವ ಅಂಗವಿಕಲ ಯುವಕ ಪ್ರತಿದಿನ ಗ್ರಾಮದ ಆಂಜನೆಯ ದೇವಸ್ಥಾನದ ಕಸ ಗುಡಿಸುವುದು, ದೇವಸ್ಥಾನದ ಧ್ವನಿವರ್ಧಕವನ್ನು ಬೆಳಿಗ್ಗೆ ಮತ್ತು ಸಂಜೆ ಚಾಲನೆ ಮಾಡಿ ನಂತರ ಬಂದ್‌ ಮಾಡುವ ಕಾರ್ಯ ಮಾಡುತ್ತಿದ್ದ.

‘ಆಂಜನೆಯ ದೇವಸ್ಥಾನದ ಧ್ವನಿವರ್ಧಕದ ಧ್ವನಿಯಿಂದ ನಮಗೆ ತೊಂದರೆಯಾಗುತ್ತಿದೆ’ ಎಂದು ಗ್ರಾಮದ ಮೌಲಾಸಾಬ ಚಮನ್‌ಸಾಬ ನದಾಫ್ ಎಂಬಾತ ರವಿ ಮನೆಗೆ ಮರಳುವ ಸಮಯದಲ್ಲಿ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ. ಜಗಳ ಬಿಡಿಸಲು ಬಂದ ಸುನೀಲ ಮರಡೂರ ಎನ್ನುವ ಯುವಕನ ಮೇಲೆಯೂ ಹಲ್ಲೆ ಮಾಡಿದ್ದಾನೆ. ಧ್ವನಿವರ್ದಕದ ವೈರ್‌ ಅನ್ನು ಈತ ಈ ಹಿಂದೆ ಎರಡು ಸಲ ಕಟ್ ಮಾಡಿದ್ದಾನೆ ಎನ್ನಲಾಗಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT