ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿನ ಗುಲಾಮನಾದರೆ ಬದುಕು ಸಾರ್ಥಕ‌

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಮತ
Last Updated 4 ಜನವರಿ 2020, 12:36 IST
ಅಕ್ಷರ ಗಾತ್ರ

ಹಾವೇರಿ: ‘ಗುರುವಿನ ಭಕ್ತಿಯಲ್ಲಿ ಪ್ರೀತಿಯನ್ನು ಸಮರ್ಪಿಸಿ, ನಮ್ಮತನವನ್ನು ಕರಗಿಸಿ ಲೀನವಾದಾಗಲೇ ಉತ್ತಮ ಸಂಸ್ಕಾರ ನಮ್ಮದಾಗುತ್ತದೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಹುಕ್ಕೇರಿಮಠದ ನಮ್ಮೂರ ಜಾತ್ರೆಯ ಅಂಗವಾಗಿ ಮೂರನೆ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯನಿಗೆ ವಿದ್ಯಾರ್ಹತೆ, ಸ್ಥಾನಮಾನ ಹೆಚ್ಚಾದಂತೆ ಅಹಂಕಾರವೂ ಹೆಚ್ಚಾಗುತ್ತಾ ಹೋಗಿ ಭ್ರಮೆಯಲ್ಲಿ ಜೀವಿಸುತ್ತಾನೆ.ಆದರೆ ಯಾವುದೇ ಸ್ಥಾನಮಾನ ಶಾಶ್ವತವಲ್ಲ. ಗುರುವಿನ ಗುಲಾಮನಾದಾಗ ಮಾತ್ರ ನಿಜವಾದ ಬದುಕು ಸಂಸ್ಕಾರಯುತವಾಗುತ್ತದೆ’ ಎಂದರು.

ಮಠವು ಜಾತಿ, ಧರ್ಮ ರಹಿತ ಸಮಾಗಮವಾಗಿದ್ದು, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಎಂದರು

‘ಕನ್ನಡ ಕೋಗಿಲೆ’ ಖ್ಯಾತಿಯ ಗಾಯಕ ಖಾಸಿಂಅಲಿ ಬಿದರಗಡ್ಡಿ ಸಂಗೀತ ಪ್ರಸ್ತುತ ಪಡಿಸಿದರು.

ಹುಕ್ಕೇರಿಮಠ ಸದಾಶಿವ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಸೇಡಂನ ಕೊತ್ತಲ ಬಸವೇಶ್ವರಮಠದ ಸದಾಶಿವ ಸ್ವಾಮೀಜಿ, ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಶಾಸಕ ನೆಹರು ಓಲೇಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ, ಬಸವರಾಜ ಅರಬಗೊಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಪ್ರಕಾಶ ಶೆಟ್ಟಿ, ತಮ್ಮಣ್ಣ ಮುದ್ದಿ, ಶಿವಪ್ಪ ಗುಂಜೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT