ಹಾವೇರಿ: ‘ನಗರದಲ್ಲಿ ಫೆ.14ರಂದು ರಾಜ್ಯ ಸರ್ಕಾರದಿಂದ ನಡೆಸಿದ ಸಮಾವೇಶಕ್ಕೆ ಸುಮಾರು ₹20 ಕೋಟಿ ಖರ್ಚು ಮಾಡಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರು, ಬೆಂಬಲ ಬೆಲೆ ಸಿಗದೇ ಒದ್ದಾಡುತ್ತಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನರಳಾಡುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಕ್ಕು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಮಾವೇಶ ಬೇಕಿತ್ತಾ’ ಎಂದು ಬಿಜೆಪಿ ಮುಖಂಡ ಬಿ.ಸಿ. ಪಾಟೀಲ ಕಿಡಿಕಾರಿದರು.

ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ನಡೆಸಿದ್ದು ಸಾವಿರ ದಿನಗಳ ಸಂಭ್ರಮದ ಸಮಾವೇಶವಲ್ಲ. ಅದು ಸುಳ್ಳಿನ ಸರಮಾಲೆ ಸಮಾವೇಶ. ಭ್ರಷ್ಟಾಚಾರ ವೈಭವೀಕರಿಸುವ ಹಾಗೂ ಆರ್ಥಿಕ ದಿವಾಳಿಯ ಸಮಾವೇಶ’ ಎಂದು ವಾಗ್ದಾಳಿ ನಡೆಸಿದರು.

‘ಅಕ್ರಮ ಸಕ್ರಮ ಮನೆ ಕಟ್ಟಿಕೊಂಡವರಿಗೆ, ಜಮೀನು ಉಳುಮೆ ಮಾಡುವವರಿಗೆ ಹಕ್ಕು ಪತ್ರ ಕೊಡಲಿ. ಅದನ್ನು ಬಿಟ್ಟು, ಪೌತಿ ಖಾತೆಗಳಿಗೆ ಹಕ್ಕುಪತ್ರ ಕೊಟ್ಟಿದ್ದಾರೆ. ಹಿರೇಕೆರೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಸತ್ತವರ ಹೆಸರಲ್ಲಿ ಪಟ್ಟಾ, ಇ–ಸ್ವತ್ತು ಪತ್ರಗಳನ್ನು ನೀಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಶಾಸಕರು ಮಾಡಬೇಕಾದ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಡೀ ಸರ್ಕಾರ ಬಂದಿರುವುದು ಹಾಸ್ಯಾಸ್ಪದ. ಪಟ್ಟಾ ನೀಡಲು ಕೆಲ ಅಧಿಕಾರಿಗಳು, ₹ 5 ಸಾವಿರದಿಂದ ₹ 10 ಸಾವಿರ ವಸೂಲಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಹಾನಗಲ್ ತಾಲ್ಲೂಕಿನ ಹಾವಣಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನರನ್ನು ಸಮಾವೇಶಕ್ಕೆ ಕರೆತರಲು ಶಾಲಾ ಬಸ್ಗಳನ್ನು ಬಳಸಲಾಗಿದೆ. ಜಿಲ್ಲಾಧಿಕಾರಿಯವರೇ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಇದು, ಶಾಲಾ ಬಸ್ಗಳ ದುರುಪಯೋಗ’ ಎಂದರು.

ಬಿಜೆಪಿ ಮುಖಂಡ ಅರುಣಕುಮಾರ ಪೂಜಾರ ಮಾತನಾಡಿ, ‘ರಾಣೆಬೆನ್ನೂರು ತಾಲ್ಲೂಕಿನಲ್ಲಿ ದುಡ್ಡು ಪಡೆದಿದ್ದಾರೆ. ಅದನ್ನು ಯಾರಿಗಾದರೂ ಹೇಳಿದರೆ, ಪಟ್ಟಾ ಕೊಡಲ್ಲವೆಂದು ಫಲಾನುಭವಿಗಳನ್ನು ಬೆದರಿಸಿ ಸಮಾವೇಶಕ್ಕೆ ಕರೆತಂದಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ಪರಾಜಿತ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು. ಸರ್ಕಾರಿ ಸಮಾವೇಶಕ್ಕಿಂತ, ಇದು ಕಾಂಗ್ರೆಸ್ ಸಮಾವೇಶವಾಯಿತು’ ಎಂದು ದೂರಿದರು.

ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಶಿವರಾಜ ಸಜ್ಜನರ, ಸಂತೋಷ ಆಲದಕಟ್ಟಿ, ನಿರಂಜನ್ ಹೇರೂರ, ವಿಜಯಕುಮಾರ ಚಿನ್ನಿಕಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.