ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಗೋಳ: ಸೋರುತಿಹುದು ಸರ್ಕಾರಿ ಕಚೇರಿ ಮಾಳಗಿ

ಶತಮಾನ ಪೂರೈಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ
ಬಸನಗೌಡ ಪಾಟೀಲ
Published 6 ಡಿಸೆಂಬರ್ 2023, 4:53 IST
Last Updated 6 ಡಿಸೆಂಬರ್ 2023, 4:53 IST
ಅಕ್ಷರ ಗಾತ್ರ

ಕುಂದಗೋಳ: ದೂಳು ಮೆತ್ತಿದ ಟೇಬಲ್, ಕುರ್ಚಿ. ಕಿತ್ತು ಹೋಗಿರುವ ಹೆಂಚು. ದಿಕ್ಕು ತಪ್ಪಿರುವ ಎಲೆಕ್ಟ್ರಿಕಲ್ ಬೋರ್ಡ್‌, ಮಳೆ ಬಂದಾಗ ನೀರು ಸೋರಿ ತಂಪು ಹಿಡಿದಿರುವ ಗೋಡೆಗಳು, ಮೂಲೆಯಲ್ಲಿ ಬಿದ್ದಿರುವ ಫ್ಯಾನು, ಕಂಪ್ಯೂಟರ್, ಒದ್ದೆಯಾದ ಮಣ್ಣಿನ ವಾಸನೆ ಇದೆಲ್ಲ ಕಾಣಸಿಗುವುದು ಕುಂದಗೋಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ.

ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರವಿರುವ ಈ ಕಟ್ಟಡವನ್ನು 1916 ರಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡ ಇಂದು ಅಥವಾ ನಾಳೆ ಬೀಳುವ ಹಂತದಲ್ಲಿದೆ. ಅಷ್ಟರ ಮಟ್ಟಿಗೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಬ್ರಿಟಿಷರ ಅವಧಿಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಪಟ್ಟಣದಲ್ಲಿರುವ ನೂರು ವರ್ಷಕ್ಕೂ ಹೆಚ್ಚಿನ ಹಳೆಯ ಕಟ್ಟಡಗಳಲ್ಲಿ ಇದು ಒಂದು ಎನ್ನುವುದು ವಿಶೇಷ.

ಬಿಇಓ ಕುಳಿತುಕೊಳ್ಳುವ ಕೊಠಡಿಯೊಂದನ್ನು ಮಾತ್ರ ವರ್ಷಗಳ ಹಿಂದೆ ನವೀಕರಣ ಮಾಡಲಾಗಿದೆ. ಇತರೆ ಸಿಬ್ಬಂದಿ ಕಾರ್ಯ ನಿರ್ವಹಿಸುವ ಹಾಲ್, ಕೊಠಡಿಗಳು, ಅಲ್ಲಿನ ಗೋಡೆಗಳ ಸ್ಥಿತಿ ಚಿಂತಾಜನಕವಾಗಿದೆ. ಜೇಡಗಳ ಬಲೆ ಅಲ್ಲಲ್ಲಿ ಕಾಣಸಿಗುತ್ತವೆ. ಆಗಾಗ ಗೋಡೆ ಉದುರಿ ಬಿದ್ದದ್ದು ಇಲ್ಲಿ ಕಾಣಬಹುದು.ಇನ್ನೂ ಕಚೇರಿಗೆ ಬಣ್ಣ ಬಳಿದು ವರ್ಷಗಳೇ ಕಳೆದಿದೆ.

ಮಳೆಗಾಲ ಬಂದರೆ ದಾಖಲೆಗಳನ್ನು ಜೋಪಾನ ಮಾಡುವುದು, ವಿದ್ಯುತ್ ಉಪಕರಣಗಳ ಕಿರಿಕಿರಿ, ಇಂಟರ್ ನೆಟ್ ಸಮಸ್ಯೆ ಅತಿಯಾಗಿ ಕಾಡುತ್ತದೆ, ಹೆಂಚಿನಿಂದ ನೀರು ಸೋರುವಾಗ ದಾಖಲೆಗಳನ್ನು ಅತ್ತಿಂದಿತ್ತ ಸಾಗಿಸುವುದೇ ಕಾಯಕವಾಗುತ್ತದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಕಟ್ಟಡದ ಅವರಣದಲ್ಲಿ ಕೆಟ್ಟು ನಿಂತ ಜೀಪು, ಸದಾ ಕಾಲ ಕಟ್ಟಡ ಎದುರಿಗೆ ಹರಿಯುವ ಚರಂಡಿ ನೀರಿನ ವಾಸನೆ, ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು ಕಚೇರಿಗೆ ಬರುವ ಸಾರ್ವಜನಿಕರಿಗೆ ಕಿರಿಕಿರಿಯಂನ್ನುಟು ಮಾಡುತ್ತಿವೆ.

‘ಕಚೇರಿಯ ಕೊಣೆಯೊಂದರಲ್ಲಿ ಜೈನ ತೀರ್ಥಂಕರರ ಮೂರ್ತಿ, ಕಚೇರಿಯ ಎದುರುಗಡೆ ಇರುವ ಅಂಗಡಿಯೊಂದರ ಬಳಿ ಗೋಪುರ ಆಕಾರದ ಶಿಲ್ಪ ಕಂಡುಬರುತ್ತವೆ. ರಾಜ ಮಹಾರಾಜರ ಕಾಲದ ನಂತರ, ಬ್ರಿಟಿಷರ ಅವಧಿಯಲ್ಲಿ ಈ ಕಟ್ಟಡವನ್ನು ಕೈದಿಗಳನ್ನು ಬಂಧಿಸಿಡಲು ಜೈಲನ್ನಾಗಿ ಉಪಯೋಗಿಸುತ್ತಿದ್ದರು, ದಿನ ಕಳೆದಂತೆ ಉಪ-ದಂಡಾಧಿಕಾರಿ ಕಚೇರಿ, ಸ್ಕೂಲಿನ ಬಳಕೆಗೆ ಈ ಕಟ್ಟಡ ಸಾಕ್ಷಿಯಾಗಿತ್ತು’ ಎನ್ನುತ್ತಾರೆ ಪಟ್ಟಣದ ಕೆಲವು ಹಿರಿಯರು.

‘ಈ ಐತಿಹಾಸಿಕ ಕಟ್ಟಡದ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಈ ಹಿಂದಿನ ಬಿಇಒ ಆಗಿದ್ದ ವಿದ್ಯಾ ಕುಂದರಗಿ ಹೇಳುತ್ತಾರೆ.

ಕುಂದಗೋಳ ಬಿ. ಇ. ಓ. ಕಚೇರಿಯ ಒಳಗಿನ ಫೋಟೋ
ಕುಂದಗೋಳ ಬಿ. ಇ. ಓ. ಕಚೇರಿಯ ಒಳಗಿನ ಫೋಟೋ
ಕುಂದಗೋಳ ಬಿ. ಇ. ಓ. ಕಚೇರಿಯ ಒಳಗಿನ ಫೋಟೋ
ಕುಂದಗೋಳ ಬಿ. ಇ. ಓ. ಕಚೇರಿಯ ಒಳಗಿನ ಫೋಟೋ
ಕುಂದಗೋಳ ಬಿ. ಇ. ಓ ಕಚೇರಿಯ ಒಳಗಿರುವ ಜೈನ ತೀರ್ಥಂಕರ ಮೂರ್ತಿ
ಕುಂದಗೋಳ ಬಿ. ಇ. ಓ ಕಚೇರಿಯ ಒಳಗಿರುವ ಜೈನ ತೀರ್ಥಂಕರ ಮೂರ್ತಿ
ಕುಂದಗೋಳ ಬಿ. ಇ. ಓ. ಕಚೇರಿಯ ಒಳಗಿನ ಫೋಟೋ
ಕುಂದಗೋಳ ಬಿ. ಇ. ಓ. ಕಚೇರಿಯ ಒಳಗಿನ ಫೋಟೋ

ಶತಮಾನ ಪೂರೈಸಿದ ಐತಿಹಾಸಿಕ ಕಟ್ಟಡ ಶಿಥಿಲಗೊಂಡ ಕಟ್ಟಡ ದುರಸ್ತಿಗೆ ಸತತ ಮನವಿ ತಾಲ್ಲೂಕಿನ ಪ್ರಮುಖ ಆಕರ್ಷಕ ಕಟ್ಟಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT