ಶುಕ್ರವಾರ, ಫೆಬ್ರವರಿ 26, 2021
32 °C
ಜ.18ರಿಂದ ಫೆ.17ರವರೆಗೆ ರಸ್ತೆ ಸುರಕ್ಷತಾ ಮಾಸ: ಹೆಲ್ಮೆಟ್‌ ಧರಿಸದವರಿಗೆ ಗುಲಾಬಿ ವಿತರಣೆ

ಜಾಗೃತಿಗಾಗಿ ಪೊಲೀಸ್‌ ಬೈಕ್‌ ರ್‍ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ದ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಾವೇರಿ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಚಾಲನೆ ನೀಡಿದರು.

ಜ.18ರಿಂದ ಫೆ.17ರವರೆಗೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ ಅಂಗವಾಗಿ ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ಅವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಕ್ರಮಗಳ ಕುರಿತಂತೆ ಮಾಹಿತಿ ನೀಡಿದರು.

ದಾರಿಯಲ್ಲಿ ಹಾದು ಹೋಗುವ ಹೆಲ್ಮೇಟ್ ಧರಿಸದೇ ಬೈಕ್ ಓಡಿಸುವ ವಾಹನವನ್ನು ತಡೆದು ಗುಲಾಬಿ ಹೂ ನೀಡಿದರು. ಹೆಲ್ಮೆಟ್‌ ಧರಿಸದೇ ಬೈಕ್ ಚಾಲನೆ ಮಾಡಿದರೆ ಉಂಟಾಗುವ ಅವಘಡಗಳು ಹಾಗೂ ಜೀವ ಕಳೆದುಕೊಳ್ಳುವ ಸಂದರ್ಭಗಳನ್ನು ವಿವರಿಸಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಚಾಲಕರಿಗೆ ಮನವರಿಕೆ ಮಾಡಿಕೊಟ್ಟರು.

ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‍ನಲ್ಲಿ ಸಂಚರಿಸುತ್ತಾ ರಸ್ತೆ ನಿಯಮ ಪಾಲನೆ, ಹೆಲ್ಮೆಟ್‌ ಧರಿಸಿ ಬೈಕ್ ಚಾಲನೆಯ ಮಹತ್ವ ಹಾಗೂ ಸಂಚಾರಿ ಮಾರ್ಗಸೂಚಿಗಳ ಅರಿವು ಮೂಡಿಸಿದರು.

ರ‍್ಯಾಲಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ಸಿಪಿಐ ಪ್ರಲ್ಹಾದ ಚನ್ನಗಿರಿ, ಪಿ.ಎಸ್.ಐ. ಬೆಟಗೇರಿ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು