ಶುಕ್ರವಾರ, ಡಿಸೆಂಬರ್ 3, 2021
20 °C

ಹಿಂದುಳಿದವರ ಅಭಿವೃದ್ಧಿಗೆ ಬಿಜೆಪಿ ಬದ್ಧ: ಶಾಸಕ ರಾಮಣ್ಣ ಲಮಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ‘ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಬಂಜಾರ ಸಮಾಜಕ್ಕೆ ಬಿಎಸ್‌ವೈ ಅವಧಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಬಂದಿವೆ’ ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಬಂಜಾರ ಸಮಾಜದ ಜನರು ಹೆಚ್ಚು ವಾಸಿಸುವ ತಾಲ್ಲೂಕಿನ ಕರಗುದರಿ, ರತ್ನಾಪೂರ, ಗುಂಡೂರ, ಬಾದಾಮಗಟ್ಟಿ, ನೆಲ್ಲಿಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರದಲ್ಲಿ ಅವರು ಮಾತನಾಡಿದರು.

ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ನಾಯಕ, ‘ಹಾನಗಲ್ ಕ್ಷೇತ್ರದ ಸಾಕಷ್ಟು ತಾಂಡಾಗಳನ್ನು ಸಿ.ಎಂ. ಉದಾಸಿ ಅಭಿವೃದ್ಧಿಪಡಿಸಿದ್ದಾರೆ’ ಎಂದರು.

ಸಂಸದ ಶಿವಕುಮಾರ ಉದಾಸಿ ಲಂಬಾಣಿ ಭಾಷೆಯಲ್ಲಿ ಭಾಷಣ ಆರಂಭಿಸಿದರು. ‘ಈ ಚುನಾವಣೆಯಲ್ಲಿ
ಹಾನಗಲ್ ಕ್ಷೇತ್ರವನ್ನು ಬಿಜೆಪಿ ಮಡಿಲಿಗೆ ಹಾಕುವ ಜವಾಬ್ದಾರಿ ತಾಲ್ಲೂಕಿನ ಮತದಾರರ ಮೇಲಿದೆ’ ಎಂದರು.

ಅಭ್ಯರ್ಥಿ ಶಿವರಾಜ ಸಜ್ಜನ ಮಾತನಾಡಿದರು. ಲಂಬಾಣಿ ಸಮಾಜದ ತಿಪ್ಪೇಸ್ವಾಮಿ ಶ್ರೀ, ಮುಖಂಡರಾದ ಪದ್ಮನಾಭ ಕುಂದಾಪೂರ, ಪ್ರಶಾಂತ ಪೂಜಾರ, ಮಾಲತೇಶ ಜಾಧವ, ಕೊಟ್ರಪ್ಪ ನಾಯಕ, ರವಿ ಪೂಜಾರ, ಮಹೇಶ ನಾಯಕ, ಕುನ್ನಪ್ಪ ದೊಡ್ಡಮನಿ, ಫಕ್ಕೀರಪ್ಪ ನಾಯಕ, ರವಿ ಕಾರಬಾರಿ, ಚಂದ್ರಪ್ಪ ಹರಿಜನ, ಶಿವಪ್ಪ ದೊಡ್ಡಮನಿ, ಜಾನಪ್ಪ ಕಡೆಮನಿ, ದಾವಲೆಪ್ಪ ಹುಣಸಿಕಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು