ಸೋಮವಾರ, ಜೂನ್ 27, 2022
28 °C
ಸುಳಿವು ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ರಾಜ್ಯ ರಾಜಕಾರಣಕ್ಕೆ ಹಾವೇರಿ ಸಂಸದ ಶಿವಕುಮಾರ ಉದಾಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ತಂದೆಯ ಜಾಗವನ್ನು ಸಂಸದ ಶಿವಕುಮಾರ ಉದಾಸಿ ತುಂಬುತ್ತಾರೆ. ಅವರ ಸ್ಥಾನದಲ್ಲಿ ಪುತ್ರನೇ ನಿಲ್ಲುತ್ತಾರೆ. ತಂದೆಯವರ ಹಾದಿಯಲ್ಲಿ ನಡೆಯಲು ನಾವು ಮನವಿ ಮಾಡುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಮೂಲಕ, ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಉದಾಸಿ ಬರುವುದನ್ನು ಪರೋಕ್ಷವಾಗಿ ತಿಳಿಸಿದರು.

ಹಾನಗಲ್‌ನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ತಂದೆಯವರ ಕೆಲಸಗಳನ್ನು ಪುತ್ರ ಮುಂದುವರಿಸಿಕೊಂಡು ಹೋಗಬೇಕು. ಉತ್ತರ ಕರ್ನಾಟಕಕ್ಕೆ ಉದಾಸಿ ಅವರ ಕೊಡುಗೆ ಅಪಾರವಾಗಿದೆ. ನಾನು ರಾಜಕೀಯಕ್ಕೆ ಬರಲು ಉದಾಸಿ ಅವರೇ ಕಾರಣ. ಅವರೇ ನನ್ನ ಗಾಡ್‌ಫಾದರ್‌’ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು