ಸೋಮವಾರ, ಡಿಸೆಂಬರ್ 6, 2021
25 °C
ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ದಾಳಿ

ಉದ್ದಿಮೆ ಪರವಾನಗಿ: ಸ್ಥಳದಲ್ಲೇ ಶುಲ್ಕ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಅಧಿಕಾರಿಗಳೊಂದಿಗೆ ನಗರದಲ್ಲಿ ಬುಧವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದರು.

ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ವಿವಿಧ ಅಂಗಡಿಗಳ ಮಾಲೀಕರು ಉದ್ದಿಮೆ ಪರವಾನಗಿ (ಟ್ರೇಡ್‌ ಲೈಸೆನ್ಸ್‌) ಪಡೆಯದೇ ಅಥವಾ ನವಿಕರೀಸದೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು. ಸ್ಥಳದಲ್ಲಿಯೇ ಉದ್ದಿಮೆ ಪರವಾನಗಿ ರಸೀದಿ ಹರಿಸಿ, ಹಣ ವಸೂಲಿ ಮಾಡಲಾಯಿತು. 

ನಗರಸಬೆಯ ಪಕ್ಕದಲ್ಲಿನ ಅಂಗಡಿ, ಬೇಕರಿಗೆ ಭೇಟಿ ನೀಡುವ ಮೂಲಕ ಉದ್ದಿಮೆ ಪರವಾನಗಿ ಪರಿಶೀಲಿಸಿದ ಅಧ್ಯಕ್ಷ ನೀರಲಗಿ ಹಾಗೂ ಪೌರಾಯುಕ್ತ ಚಲವಾದಿ ಅವರು ರಸೀದಿ ನೀಡಿ ಹಣ ಪಡೆದರು.

ಅಲ್ಲಿಂದ ನಗರದ ಗಾಂಧಿವೃತ್ತ, ಜೆ.ಪಿ. ವೃತ್ತ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಉದ್ದಿಮೆ ಪರವಾನಗಿ ನೀಡುವ ಮೂಲಕ ನಗರಸಭೆಗೆ ಬರಬೇಕಾದ ಬಾಕಿ ವಸೂಲಿಗೆ ಕ್ರಮ ಜರುಗಿಸಿದರು.

ರಸ್ತೆ ದುರಸ್ತಿಗೆ ಅನುದಾನ ಕೋರಿಕೆ

ಸತತ ಮಳೆಯಿಂದಾಗಿ ಹಾವೇರಿ ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಜನರ ಸಂಚಾರಕ್ಕೆ ತೀವ್ರ ಧಕ್ಕೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಲು ನಗರಸಭೆಯಲ್ಲಿ ಅನುದಾನದ ಕೊರತೆ ಇರುವುದರಿಂದ, ಎಸ್‌ಡಿಆರ್‌ಎಫ್‌ನಿಂದ ₹2 ಕೋಟಿ ವಿಶೇಷ ಅನುದಾನವನ್ನು ಕೊಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣ ಅವರಿಗೆ ಮನವಿ ಸಲ್ಲಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು