ಶುಕ್ರವಾರ, ನವೆಂಬರ್ 27, 2020
19 °C

ಹಾವೇರಿ: ಸಂಭ್ರಮದ ಸೀಗೆ ಹುಣ್ಣಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹಾನಗಲ್‌ ತಾಲ್ಲೂಕಿನ ಆಡೂರ ಸೇರಿ ಸುತ್ತಮುತ್ತಲ ಗ್ರಾಮಗಳ ರೈತರು ‘ಸೀಗೆ ಹುಣ್ಣಿಮೆ’ಯನ್ನು ಶ್ರದ್ಧಾಭಕ್ತಿಯಿಂದ ಗುರುವಾರ ಆಚರಿಸಿದರು.

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ಅನ್ನದಾತರು ಸಂಭ್ರಮದಿಂದ ಭೂದೇವಿಯ ಆರಾಧನೆ ಮಾಡಿದರು. ಪ್ರತಿ ವರ್ಷ ವಿಜಯದಶಮಿ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ.

ಇಲ್ಲಿನ ರೈತರು ಸೂರ್ಯೋದಯಕ್ಕೂ ಮುನ್ನವೇ ಜಾನುವಾರುಗಳ ಮೈ ತೊಳೆದು, ಸಿಂಗರಿಸಿ, ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ತಮ್ಮ ಕೃಷಿ ಭೂಮಿಗೆ ತೆರಳಿ, ಭೂಮಾತೆಗೆ ಪೂಜೆ ಸಲ್ಲಿಸುತ್ತಾರೆ. ಭೂಮಿತಾಯಿ ಜತೆಗೆ ಪಂಚ ಪಾಂಡವರನ್ನು ಸ್ಥಾಪಿಸಿ, ಪೂಜೆ ಸಲ್ಲಿಸುವುದು ಈ ಭಾಗದ ವಿಶೇಷ.

ಸೀಗೆ ಹುಣ್ಣಿಮೆಯ ಸಡಗರಕ್ಕಾಗಿಯೇ ಹತ್ತಾರು ಆಹಾರ ಪದಾರ್ಥಗಳು ಸಿದ್ಧಗೊಂಡಿದ್ದವು. ಕಡುಬು, ಖರ್ಜಿಕಾಯಿ, ಹೋಳಿಗೆ, ಎಣಗಾಯಿ ಪಲ್ಯ, ಮಡಕಿಕಾಳು ಪಲ್ಯ... ಮುಂತಾದ ಸಿಹಿ ತಿನಿಸುಗಳನ್ನು ಶಿವಬಸಪ್ಪ ಪೂಜಾರ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜತೆಗೂಡಿ ಸಹಭೋಜನ ಮಾಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.