ಶಿಗ್ಗಾವಿ: ಮಕ್ಕಳ ಬೆಳವಣಿಗೆ ಜವಾಬ್ದಾರಿ ಪಾಲಕರದಾಗಿದ್ದು, ಅವರಿಗೆ ಬದುಕು ಕಟ್ಟಿಕೊಳ್ಳುವ ವ್ಯವಹಾರಿಕ ಜ್ಞಾನ ನೀಡಿ ಎಂದು ಬಿಇಒ ಎಂಬಿ.ಅಂಬಿಗೇರ ಹೇಳಿದರು.

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಲಯನ್ಸ್ ಶಾಲಾ ಮೈದಾನದಲ್ಲಿ ಶುಕ್ರವಾರ ದಿ.ಲಯನ್ಸ್ ನವಭಾರತ ಎಜ್ಯುಕೇಷನ್ ಸೊಸೈಟಿ ವತಿಯಿಂದ ನಡೆದ ಸಿಂಹ ಸಂಸ್ಥೆಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿ.ಲಯನ್ಸ್ ನವಭಾರತ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಆರ್.ಎಸ್.ಅರಳೆಲೆಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ನವಭಾರತ ಶಿಕ್ಷಣ ಸಂಸ್ಥೆ ಕಟ್ಟಲಾಗಿದ್ದು, ಅದರಿಂದ ಸುತ್ತಲಿನ ಗ್ರಾಮಗಳ ಮಕ್ಕಳು ಕಲಿಯುವ ಮೂಲಕ ಉನ್ನತ ಸ್ಥಾನಮಾನಗಳನ್ನು ಪಡೆದಿದ್ದಾರೆ. ಅದರಿಂದ ಸಂಸ್ಥೆ ಮತ್ತು ಪಾಲಕರಿಗೆ ಕೊಡುಗೆ ನೀಡಿದಂತಾಗಿದೆ. ಅಲ್ಲದೆ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಬಂಕಾಪುರ ಠಾಣೆ ಪಿ.ಎಸ್.ಐ. ಮಂಜುನಾಥ ಕುರಿ ಮಾತನಾಡಿ, ನಿತ್ಯ ಮಕ್ಕಳ ಚಟುವಟಿಕೆಗಳ ಕುರಿತು ನಿಗಾ ವಹಿಸಬೇಕು. ಒಬ್ಬ ರೈತ ವರ್ಷ ಇಡೀ ಶ್ರಮವಹಿಸಿ ದುಡಿದು ಬೆಳೆಸಿದ ಬೆಳೆಯಂತೆ ಮಕ್ಕಳ ಪೋಷಣೆ ಮಾಡಬೇಕು. ಅದಕ್ಕಾಗಿ ಉತ್ತಮ ಸಂಸ್ಕಾರ, ಸಂಸ್ಕೃತಿಗಳನ್ನು ನೀಡಿರಿ. ಸರಿ, ತಪ್ಪುಗಳ ಬಗ್ಗೆ ತಿಳಿಸಿರಿ ಎಂದರು.

ಲಯನ್ಸ್ ನವಭಾರತ ವಿದ್ಯಾಸಂಸ್ಥೆ ಉಪಾಧ್ಯಕ್ಷ ಜಿ.ಐ.ಸಜ್ಜನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಆಫ್ ಬಂಕಾಪುರ ಟೌನ್ ಅಧ್ಯಕ್ಷ ಎಸ್.ಬಿ.ಆದವಾನಿಮಠ, ಲಯನ್ಸ್ ನವಭಾರತ ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ.ಕೆ.ಎಂ.ಬಮ್ಮನಹಳ್ಳಿ, ಆರ್.ಎಸ್.ಕೊಲ್ದಾವರ, ಕಸಾಪ ಬಂಕಾಪುರ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ, ಜಯಣ್ಣ ಶೆಟ್ಟರ ಇದ್ದರು. ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜನ ಮನ ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.