ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿ: ಪಿ.ವೈ.ಶೆಟ್ಟಪ್ಪನವರ

ಮಕ್ಕಳ ಹಬ್ಬ
Last Updated 15 ಡಿಸೆಂಬರ್ 2018, 11:18 IST
ಅಕ್ಷರ ಗಾತ್ರ

ಹಾವೇರಿ:ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮತ್ತು ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಿ.ವೈ.ಶೆಟ್ಟಪ್ಪನವರ ಹೇಳಿದರು.

ನಗರದ ಸಂಖ್ಯೆ– 3ನೇ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ‘ಮಕ್ಕಳ ಹಬ್ಬ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನವು ಬದುಕಿನ ಅವಿಭಾಜ್ಯ ಅಂಗವಾಗಿದೆ. ವಿಜ್ಞಾನದ ಸದುಪಯೋಗ ಪಡೆದುಕೊಳ್ಳಲು, ಬಾಲ್ಯದಲ್ಲೇ ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದ ಅವರು, ಮಕ್ಕಳು ಸಮಯಕ್ಕೆ ಬೆಲೆ ಕೊಡಬೇಕು. ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡವರೇ ಸಾಧಕನಾಗುತ್ತಾರೆ ಎಂದರು.

ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಬಿ.ಬಸವರಾಜ ಮಾತನಾಡಿ, ಮಕ್ಕಳು ಟಿವಿ, ಮೊಬೈಲ್‌, ಕಂಪ್ಯೂಟರ್‌ಗಳನ್ನು ಸಕಾರಾತ್ಮಕವಾಗಿ ಬಳಸಬೇಕು. ತಂತ್ರಜ್ಞಾನವನ್ನು ನಮ್ಮ ಮತ್ತು ಸಮಾಜದ ಬೆಳವಣಿಗೆಗಾಗಿ ಬಳಸಿಕೊಂಡಾಗ, ಯಶಸ್ಸು ನಮ್ಮದಾಗುತ್ತದೆ ಎಂದರು.

ಹಿರಿಯ ಲೇಖಕ ಸತೀಶ ಕುಲಕರ್ಣಿ, ಸಂಖ್ಯೆ 3ನೇ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ ಕೊಪ್ಪದ, ಎಂ.ಎಸ್. ಜಂಗರೆಡ್ಡೆರ, ಸುರೇಶ ಬುಗಟಿ, ಎಂ.ಎಸ್.ಯತ್ನಳ್ಳಿ, ವಿ.ಎಸ್.ಪಾಟೀಲ, ಎಚ್.ಎಸ್ ಹಿರೇಮಠ, ಕೆ.ಎಸ್.ಶಿವಸಿಂಪಿ, ಅಕ್ಕಮಹಾದೇವಿ ಹಿರೇಮಠ, ರವೀಂದ್ರ ಮಳಗಿ, ಅಶೋಕ ಯಣ್ಣಿಯವರ, ಎಂ.ಜಿ.ಹಿರೇಮಠ, ಎಸ್.ಆರ್.ಹಿರೇಮಠ, ಆರ್.ಈಶ್ವರಿ, ಭಾರತ ಜ್ಞಾನ ವಿಜ್ಞಾನ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಗುಡಿಮನಿ, ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಓಂಕಾರಣ್ಣನವರ, ತಾಲ್ಲೂಕು ಅಧ್ಯಕ್ಷ ಮಾಲತೇಶ ಕರ್ಜಗಿ, ಬಾಲಭವನದ ಕಾರ್ಯಕ್ರಮ ಸಂಯೋಜಕ ಸೋಮನಗೌಡ ಗಾಳಿಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT