ಬುಧವಾರ, ಜನವರಿ 22, 2020
25 °C

ಎದುರಾಳಿಯ ಹಣದ ಆಮಿಷಕ್ಕೆ ಕೆಲವು ಮತದಾರರು ಬಲಿಯಾಗಿದ್ದಾರೆ: ಬಿ.ಎಚ್‌. ಬನ್ನಿಕೋಡ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ನಾನು ಅಧಿಕಾರಕ್ಕಾಗಿ ಸ್ಪರ್ಧೆ ಮಾಡಿಲ್ಲ. ಸ್ವಾಭಿಮಾನಕ್ಕಾಗಿ ಸ್ಪರ್ಧೆ ಮಾಡಿದ್ದೇನೆ’ ಎಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌.ಬನ್ನಿಕೋಡ ತಿಳಿಸಿದರು. 

ಮತ ಎಣಿಕೆ ಕೇಂದ್ರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ಎದುರಾಳಿಯ (ಬಿ.ಸಿ.ಪಾಟೀಲ) ಹಣದ ಆಮಿಷಕ್ಕೆ ಕೆಲವು ಮತದಾರರು ಬಲಿಯಾಗಿದ್ದಾರೆ. ಹೀಗಾಗಿ ಗೆಲುವು ಕೈ ತಪ್ಪಿ ಹೋಯಿತು. ‘ಸರ್ವಜ್ಞನ ನಾಡಿನಲ್ಲಿ ಸತ್ಯಕ್ಕೆ ಜಯ’ ಎಂದು ನಂಬಿದ್ದೇನೆ. ಹಾಗಾಗಿ ನನ್ನ ಹೋರಾಟ ಇಲ್ಲಿಗೆ ಅಂತ್ಯವಾಗುವುದಿಲ್ಲ. ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ಭರವಸೆ ನೀಡಿದರು. 

‘ಜನತೆಯ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ, ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳಾಗಿ, ಅಕ್ರಮಗಳನ್ನು ನಡೆಸಿ, ಕಾನೂನುಬಾಹಿರವಾಗಿ ಗೆಲುವಿನ ತಂತ್ರ ರೂಪಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ಹೋರಾಟ ನಡೆಸುತ್ತೇನೆ’ ಎಂದು ನುಡಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು