ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 128 ಮಂದಿಗೆ ಕೋವಿಡ್ 

Last Updated 18 ಸೆಪ್ಟೆಂಬರ್ 2020, 15:19 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ ಇಲಾಖೆ ನೌಕರರು ಒಳಗೊಂಡಂತೆ ಜಿಲ್ಲೆಯಲ್ಲಿ ಶುಕ್ರವಾರ 128 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 106 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರ ವಿವರ:ಬ್ಯಾಡಗಿ-25, ಹಾನಗಲ್ -15, ಹಾವೇರಿ-18, ಹಿರೇಕೆರೂರು-17, ರಾಣೆಬೆನ್ನೂರು-38, ಸವಣೂರು-10, ಶಿಗ್ಗಾವಿ-5 ಜನರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಗುಣಮುಖರಾಗಿ ಬ್ಯಾಡಗಿ-34, ಹಾನಗಲ್-01, ಹಾವೇರಿ-28, ರಾಣೇಬೆನ್ನೂರು-43 ಜನರು ಬಿಡುಗಡೆ ಹೊಂದಿದ್ದಾರೆ.

ಮರಣ:

ಹಾವೇರಿ ತಾಲ್ಲೂಕು ದೇವಗಿರಿ ಗ್ರಾಮದ 43 ವರ್ಷದ ಪುರುಷ, ಹೊಸರಿತ್ತಿಯ 68 ವರ್ಷದ ಮಹಿಳೆ ಹಾಗೂ ಕಾಟೇನಹಳ್ಳಿಯ 73 ವರ್ಷದ ಪುರುಷ ಮೃತಪಟ್ಟಿದ್ದು, ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT