ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ವೈದ್ಯ ಸೇರಿ 95 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 1764ಕ್ಕೆ ಏರಿಕೆಯಾದ ಪ್ರಕರಣಗಳು: 40 ಮಂದಿ ಗುಣಮುಖರಾಗಿ ಬಿಡುಗಡೆ
Last Updated 8 ಆಗಸ್ಟ್ 2020, 15:40 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಕೆ.ಎಸ್.ಆರ್.ಟಿ.ಸಿ., ಅಂಚೆ ಕಚೇರಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಪತ್ರಿಕಾ ಕಾರ್ಯಾಲಯ ಉದ್ಯೋಗಿಗಳು ಹಾಗೂ ವೈದ್ಯರು ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ 95 ಜನರಿಗೆ ಕೋವಿಡ್-19 ದೃಢಪಟ್ಟಿದೆ. 40 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,764 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 953 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಶನಿವಾರದ ಎರಡು ಸಾವು ಸೇರಿ ಒಟ್ಟಾರೆ 35 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 776 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಶನಿವಾರ ದೃಢಗೊಂಡ ಪ್ರಕರಣಗಳಲ್ಲಿಸವಣೂರು-1, ಶಿಗ್ಗಾವಿ– 3, ರಾಣೆಬೆನ್ನೂರು-23, ಹಾವೇರಿ-38, ಬ್ಯಾಡಗಿ-9, ಹಾನಗಲ್-5, ಹಿರೇಕೆರೂರು-16 ಮಂದಿಗೆ ಸೋಂಕು ದೃಢಪಟ್ಟಿದೆ. ಸವಣೂರು-5, ರಾಣೆಬೆನ್ನೂರು-19, ಹಾವೇರಿ-10, ಬ್ಯಾಡಗಿ-3, ಹಿರೇಕೆರೂರು ತಾಲ್ಲೂಕಿನ 3 ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣದ ವಿವರ:ರಾಣೆಬೆನ್ನೂರ ನಗರದ 54 ವರ್ಷದ ಪುರುಷ (ಪಿ-160322) ಹಾಗೂ 51 ವರ್ಷದ ಪುರುಷ (ಪಿ-136214 ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. 54 ವರ್ಷದ ಪುರುಷ ಆಗಸ್ಟ್ 6ರಂದು ಮೃತಪಟ್ಟಿರುತ್ತಾರೆ 51 ವರ್ಷದ ಪುರುಷ ಆಗಸ್ಟ್ 7ರಂದು ಮೃತಪಟ್ಟಿರುತ್ತಾರೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಸೋಂಕಿತರ ವಿವರ:ರಾಣೇಬೆನ್ನೂರ ನಗರದ ವಿವಿಧ ಬಡಾವಣೆಯ -15, ಕುರುಬಗೇರಿಯ -2, ಅಸುಂಡಿ-2, ಚಿಕ್ಕಳ್ಳಳ್ಳಿ, ಕಣವಿಸಿದ್ದನಗೇರಿ, ಇಟಗಿ, ಗುಡ್ಡದ ಆನ್ವೇರಿಯ, ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.ಹಾವೇರಿ ನಗರದ-21, ಹಾವನೂರ-11, ಗುತ್ತಲ-2, ಕಳ್ಳಿಹಾಳ, ಗುಡಸಾಲನಕೊಪ್ಪ, ಬೆಳವಿಗಿ, ದೇವಿಹೊಸೂರ ತಲಾ ಒಬ್ಬರಿಗೆ ಕೋವಿಡ್‌ ದೃಢಪಟ್ಟಿದೆ.

ಬ್ಯಾಡಗಿ ಪಟ್ಟಣದ-6, ಅಂದಾನಿಕೊಪ್ಪ, ಚಿನ್ನಿಕಟ್ಟಿ ಹಾಗೂ ಮಾಸಣಗಿ ತಲಾ ಒಬ್ಬರಿಗೆ ಹಾಗೂ ಸವಣೂರ ಪಟ್ಟಣದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಹಿರೇಕೆರೂರು 4, ಹಿರೇಮಾದಾಪುರ-4, ಬನ್ನಿಹಟ್ಟಿ-2, ಹಂಸಭಾವಿ, ರಟ್ಟೀಹಳ್ಳಿ, ತಿಪ್ಪಾಯಿಕೊಪ್ಪ, ಕಂಡೇಬಾಗೂರ, ಮಾಸೂರ, ಚಿಕ್ಕಯಡಚಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಶಿಗ್ಗಾವಿ, ಹಿರೇಮಲ್ಲಾಪುರ ಹಾಗೂ ಬೆಳಗಲಿ ತಲಾ ಒಬ್ಬರಿಗೆ ಹಾಗೂ ಹಾನಗಲ್-2, ಕಾಮನಹಳ್ಳಿ, ಅಕ್ಕಿಆಲೂರು, ಅರೇಲಕಮಾಪೂರಿನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ‘ಕಂಟೈನ್‍ಮೆಂಟ್ ಜೋನ್’ ಹಾಗೂ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT