ಶುಕ್ರವಾರ, ಆಗಸ್ಟ್ 7, 2020
28 °C
ಎಆರ್‌ಎಸ್‌ಐ ಸೇರಿ 14 ಮಂದಿಗೆ ಸೋಂಕು: ಇಬ್ಬರ ಸಾವು, ಮೂವರ ಬಿಡುಗಡೆ

ಜಿಲ್ಲೆಯಲ್ಲಿ ‘ತ್ರಿ ಶತಕ’ ಗಡಿ ದಾಟಿದ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಸಹಾಯಕ ರಿಸರ್ವ್‌ ಸಬ್‌ ಇನ್‌ಸ್ಪೆಕ್ಟರ್‌ (ಎಆರ್‌ಎಸ್‌ಐ)‌, ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿ.ಆರ್.ಪಿ.ಎಫ್) ಕಾನ್‍ಸ್ಟೆಬಲ್‌ ಸೇರಿ ಭಾನುವಾರ ಜಿಲ್ಲೆಯಲ್ಲಿ 14 ಮಂದಿಗೆ ಕೋವಿಡ್‌ ಪಾಸಿಟಿವ್ ದೃಢಗೊಂಡಿದೆ. ಇಬ್ಬರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಇದುವರೆಗೆ 302 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 137 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. 159 ಪ್ರಕರಣಗಳು ಸಕ್ರಿಯವಾಗಿವೆ ಎಂದು ಮಾಹಿತಿ ನೀಡಿದ್ದಾರೆ. 

ಭಾನುವಾರದಂದು ಹಾವೇರಿ ಹಾಗೂ ಹಿರೇಕೆರೂರು ತಾಲೂಕಿನಲ್ಲಿ ತಲಾ 5, ಶಿಗ್ಗಾವಿ, ರಾಣೆಬೆನ್ನೂರು, ಹಾನಗಲ್ ಹಾಗೂ ಬ್ಯಾಡಗಿ ತಾಲ್ಲೂಕುಗಳಲ್ಲಿ ತಲಾ ಒಬ್ಬರಂತೆ 14 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.

ಸೋಂಕಿತರ ವಿವರ:

ಹಿರೇಕೆರೂರು ತಾಲ್ಲೂಕು ರಾಮತೀರ್ಥದ 69 ವರ್ಷದ ಪುರುಷ (ಎಚ್.ವಿ.ಆರ್-289) 13 ವರ್ಷದ ಬಾಲಕ (ಎಚ್.ವಿ.ಆರ್.290) ಹಾಗೂ 25 ವರ್ಷದ ಯುವತಿ (ಚ್.ವಿ.ಆರ್.301), ತಿಪ್ಪಾಯಿಕೊಪ್ಪದ 45 ವರ್ಷದ ಪುರುಷ (ಎಚ್.ವಿ.ಆರ್.-299) ಹಾಗೂ 65 ವರ್ಷದ ಪುರುಷನಿಗೆ (ಎಚ್.ವಿ.ಆರ್.-300), ಹಾವೇರಿ ತಾಲ್ಲೂಕು ಆಲದಕಟ್ಟಿ ಗ್ರಾಮದ ಬಸವೇಶ್ವರನಗರದ 25 ವರ್ಷದ ಯುವಕನಿಗೆ (ಎಚ್.ವಿ.ಆರ್-293) ಸೋಂಕು ದೃಢಗೊಂಡಿದೆ.

ಹಾವೇರಿ ನಗರದ ನಾಗೇಂದ್ರನಮಟ್ಟಿ ಸಿದ್ಧರಾಮೇಶ್ವರ ಗುಡಿಯ ಹತ್ತಿರ 25 ವರ್ಷದ ಯುವತಿ (ಎಚ್.ವಿ.ಆರ್-294), ಹೊಸರಿತ್ತಿಯ ಪೆಟ್ರೋಲ್ ಬಂಕ್ ಸಮೀಪದ 39 ವರ್ಷದ ಪುರುಷ (ಎಚ್.ವಿ.ಆರ್.-295), ಯತ್ನಳ್ಳಿಯ ಗೌಡರ ಓಣಿಯ 41 ವರ್ಷದ ಪುರುಷ (ಎಚ್.ವಿ.ಆರ್-296) ಹಾಗೂ ಕೆರಿಮತ್ತಿಹಳ್ಳಿಯ ಗೋಲ್ಡನ್ ಲೇಔಟ್‍ನ 41 ವರ್ಷದ ಪುರುಷನಿಗೆ (ಎಚ್.ವಿ.ಆರ್.-297) ಪಾಸಿಟಿವ್‌ ವರದಿ ಬಂದಿದೆ. 

ಬ್ಯಾಡಗಿ ತಾಲ್ಲೂಕು ಕಲ್ಲೆದೇವರ ಗ್ರಾಮದ 25 ವರ್ಷದ ಪುರುಷ (ಎಚ್.ವಿ.ಆರ್.-292), ಹಾನಗಲ್‍ನ ಮಟನ್ ಮಾರುಕಟ್ಟೆಯ 36 ವರ್ಷದ ಪುರುಷ (ಎಚ್.ವಿ.ಆರ್-298), ಶಿಗ್ಗಾವಿಯ ಹಳೆಪೇಟೆಯ 24 ವರ್ಷದ (ಎಚ್.ವಿ.ಆರ್.302) ಹಾಗೂ ರಾಣೇಬೆನ್ನೂರು ಎ.ಕೆ.ಜಿ. ಕಾಲೋನಿಯ 42 ವರ್ಷದ ಮಹಿಳೆ (ಎಚ್.ವಿ.ಆರ್-291) ಸೋಂಕು ದೃಢಪಟ್ಟಿದೆ.

ಮೂವರ ಬಿಡುಗಡೆ:

ಪಿ-14604, ಪಿ-14606 ಹಾಗೂ ಪಿ-14612 ಮೂವರು ಸೋಂಕಿತರು ಗುಣಮುಖರಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.