ಸೋಮವಾರ, ಜುಲೈ 26, 2021
21 °C
ಜಿಲ್ಲೆಯಲ್ಲಿ 459ಕ್ಕೆ ಏರಿಕೆಯಾದ ಪ್ರಕರಣಗಳು: ಇಬ್ಬರು ಸಾವು, ನಾಲ್ವರು ಗುಣಮುಖ

ಹಾವೇರಿ | ತಹಶೀಲ್ದಾರ್‌ ಸೇರಿ 54 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಶಿಗ್ಗಾವಿ ತಾಲ್ಲೂಕು ತಹಶೀಲ್ದಾರ್, ದಿನಪತ್ರಿಕೆಯ ಜಾಹೀರಾತು ಪ್ರತಿನಿಧಿ‌, ಸರ್ಕಾರಿ ಆಸ್ಪತ್ರೆಯ ಶುಶ್ರೂಷಾಧಿಕಾರಿಗಳು, ಡಿ–ದರ್ಜೆ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ 54 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ನಾಲ್ವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಹಾಗೂ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟಾರೆ 459 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 292 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 11 ಮಂದಿ ಮೃತಪಟ್ಟಿದ್ದಾರೆ. 156 ಪ್ರಕರಣಗಳು ಸಕ್ರಿಯವಾಗಿವೆ.  

ಭಾನುವಾರ ಶಿಗ್ಗಾವಿ ತಾಲ್ಲೂಕಿನ 30, ಹಾವೇರಿ ತಾಲ್ಲೂಕಿನ 9, ರಾಣೆಬೆನ್ನೂರು, ಹಾನಗಲ್ ಹಾಗೂ ಸವಣೂರಿನಲ್ಲಿ ತಲಾ ಐದು ಪ್ರಕರಣಗಳು ಸೇರಿದಂತೆ 54 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ವಿವರ:

ಶಿಗ್ಗಾವಿ ತಾಲ್ಲೂಕು:

ಶಿಗ್ಗಾವಿಯ ಅಂಬೇಡ್ಕರ್‌ ನಗರದ 45 ವರ್ಷದ ಪುರುಷ, ಗೌಡರ್‌ ಓಣಿಯ 50 ವರ್ಷದ ಮಹಿಳೆ, ಕಡೆಕೇರಿ ಓಣಿಯ 55 ವರ್ಷದ ಪುರುಷ, ಅತ್ತಿಗೇರಿಯ 45 ವರ್ಷದ ಮಹಿಳೆ, ಶಿಗ್ಗಾವಿ ಪಟ್ಟಣದ ಹಿರೇಮಠ ಓಣಿಯ 26 ವರ್ಷದ ಪುರುಷ, ಹಳೇಪೇಟೆ ಓಣಿಯ 45 ವರ್ಷದ ಪುರುಷ, 40 ವರ್ಷದ ಮಹಿಳೆ, ಬಂಕಾಪುರ ಶಾ ಬಜಾರಿನ 36 ವರ್ಷದ ಪುರುಷ, ಶಿಗ್ಗಾವಿ ಹಿರೇಮಠ ಓಣಿಯ 70 ವರ್ಷದ ಮಹಿಳೆ, ನವನಗರ ಓಣಿಯ 40 ವರ್ಷದ ಪುರುಷ, ಚಿಕ್ಕಾಪುರದ 60 ವರ್ಷದ ಮಹಿಳೆ, ಶಿಗ್ಗಾವಿ ಅಂಬೇಡ್ಕರ್‌ ಓಣಿಯ 48 ವರ್ಷದ ಮಹಿಳೆ, ಮಲ್ಲಿಕಾರ್ಜುನ ನಗರದ 71 ವರ್ಷದ ಪುರುಷ, 33 ವರ್ಷದ ಪುರುಷ, 55 ವರ್ಷದ ಪುರುಷನಿಗೆ ಸೋಂಕು ದೃಢಗೊಂಡಿದೆ. 

ಬಂಕಾಪುರದ 47 ವರ್ಷದ ಮಹಿಳೆ, ಮಲ್ಲಿಕಾರ್ಜುನ ನಗರದ 60 ವರ್ಷದ ಪುರುಷ, ಬಂಕಾಪುರದ 7 ವರ್ಷದ ಬಾಲಕಿ, ಶಿಗ್ಗಾವಿ ತಹಶೀಲ್ದಾರ್‌ ಕಚೇರಿಯ 50 ವರ್ಷದ ಪುರುಷ, ಬಂಕಾಪುರ ಕೋಟಿಗೇರಿ ಓಣಿಯ 10 ವರ್ಷದ ಬಾಲಕ, ಶಿಗ್ಗಾವಿಯ ತಹಶೀಲ್ದಾರ್‌ ವಸತಿಗೃಹದ 38 ವರ್ಷದ ಮಹಿಳೆ, 15 ವರ್ಷದ ಬಾಲಕ, 14 ವರ್ಷದ ಬಾಲಕಿ, 17 ವರ್ಷದ ಬಾಲಕಿ, 9 ವರ್ಷದ ಬಾಲಕಿ, ಬಂಕಾಪುರದ 11 ವರ್ಷದ ಬಾಲಕ, ಶಿಗ್ಗಾವಿಯ ಮೆಹಬೂಬ ನಗರದ 32 ವರ್ಷದ ಪುರುಷ, ಬಂಕಾಪುರದ 29 ವರ್ಷದ ಪುರುಷ, 14 ವರ್ಷದ ಬಾಲಕ, ಅಂದಲಗಿಯ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಹಾವೇರಿ ತಾಲ್ಲೂಕು:

ಅಶ್ವಿನಿನಗರದ 37 ವರ್ಷದ ಮಹಿಳೆ, 17 ವರ್ಷದ ಬಾಲಕಿ, 20 ವರ್ಷದ ಯುವಕ, ಆಲದಕಟ್ಟಿಯ 75 ವರ್ಷದ ಪುರುಷ, ಅಶ್ವಿನಿಗರದ 32 ವರ್ಷದ ಪುರುಷ, ವಿದ್ಯಾನಗರ ಆನೆ ಪಾರ್ಕಿನ 38 ವರ್ಷದ ಮಹಿಳೆ, ದೇಸಾಯಿ ಗಲ್ಲಿಯ ದಿನಪತ್ರಿಕೆಯ ಜಾಹೀರಾತು ಪ್ರತಿನಿಧಿ 44 ವರ್ಷದ ಪುರುಷ, ಗುತ್ತಲದ 58 ವರ್ಷದ ಪುರುಷ ಹಾಗೂ ಅಶ್ವಿನಿಗರದ 37 ವರ್ಷದ ಮಹಿಳೆ ಸೋಂಕು ದೃಢಪಟ್ಟಿದೆ. 

ಹಾನಗಲ್ ತಾಲ್ಲೂಕು:

ಬೊಮ್ಮನಹಳ್ಳಿ 60 ವರ್ಷದ ಮಹಿಳೆ, ಹಾನಗಲ್ ಬಜಾಜ್ ಶೋರೂಂನ 20 ವರ್ಷದ ಯುವಕ, ಲಕ್ಷ್ಮೀಪುರದ 35 ವರ್ಷದ ಮಹಿಳೆ, ಹಾನಗಲ್ ಕಮತಗೇರಿಯ ಪಿ-14603 ಸಂಪರ್ಕಿತರಾದ 40 ವರ್ಷದ ಪುರುಷ ಹಾಗೂ 60 ವರ್ಷದ ಮಹಿಳೆಗೆಸೋಂಕು ದೃಧಪಟ್ಟಿದೆ.

ಸವಣೂರ ತಾಲ್ಲೂಕು:

ಹಿರೇಮೆಳ್ಳಿಹಳ್ಳಿ ಗ್ರಾಮದ 44 ವರ್ಷದ ಪುರುಷ, 29 ವರ್ಷದ ತಾಲ್ಲೂಕು ಆಸ್ಪತ್ರೆ ಡಿ –ಗ್ರೂಪ್ ಮಹಿಳಾ ಸಿಬ್ಬಂದಿ, ಎಂಟು ವರ್ಷದ ಬಾಲಕ, 38 ವರ್ಷದ ಪುರುಷ ಹಾಗೂ ಶಿಗ್ಗಾವಿ ತಾಲ್ಲೂಕು ಆಸ್ಪತ್ರೆಯ 31 ವರ್ಷದ ಸ್ಟಾಫ್ ನರ್ಸ್‌ಗೆ ಸೋಂಕು ದೃಢಪಟ್ಟಿದೆ. 

ರಾಣೆಬೆನ್ನೂರು ತಾಲ್ಲೂಕು:

ರಂಗನಾಥ್ ನಗರದ 62 ವರ್ಷದ ಪುರುಷ, ಗೌರಿಶಂಕರ ನಗರದ 42 ವರ್ಷದ ಮಹಿಳೆ, ಹುಣಸಿಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮೀಪದ 12 ವರ್ಷದ ಬಾಲಕಿ, ತಾಲ್ಲೂಕು ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ 45 ವರ್ಷದ ಪುರುಷ, 33 ವರ್ಷದ ಸ್ಟಾಫ್ ನರ್ಸ್‌ಗೆ ಸೋಂಕು ದೃಢಪಟ್ಟಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು