ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಸಭಾವಿ| ಯುವಕ ಆತ್ಮಹತ್ಯೆ: 6 ಮಂದಿ ವಿರುದ್ಧ ಎಫ್‌ಐಆರ್‌

Published 4 ಜೂನ್ 2023, 9:00 IST
Last Updated 4 ಜೂನ್ 2023, 9:00 IST
ಅಕ್ಷರ ಗಾತ್ರ

ಹಂಸಭಾವಿ:

ಬ್ಯಾಡಗಿ ತಾಲ್ಲೂಕು ಚಿಕ್ಕಣಜಿ ಗ್ರಾಮದ ಸುರೇಶನಾಯ್ಕ ವಿಷ ಕುಡಿದು ಮೃತಪಟ್ಟವರು. 

ಘಟನೆ ಹಿನ್ನೆಲೆ:

ಶಿಕಾರಿಪುರ ತಾಲ್ಲೂಕಿನ ಚಿಕ್ಕಮಾಗಡಿ ಗ್ರಾಮದ ಮಂಜುನಾಯ್ಕ ಹಾಗೂ ಹಾನಗಲ್ ತಾಲ್ಲೂಕಿನ ಬಾಳೂರ ತಾಂಡಾದ ರಾಜೇಶ್ವರಿ ಲಮಾಣಿ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿಯ ಕಡೆಯವರಿಗೆ ಮಂಜುನಾಯ್ಕ ₹4 ಲಕ್ಷ ನಗದು, 25 ಗ್ರಾಂ ಬಂಗಾರ ನೀಡಿದ್ದರು. ಆದರೆ, ಯುವತಿಯ ಪೋಷಕರು ಬೇರೆ ಯುವಕನ ಜೊತೆ ಮದುವೆ ಮಾಡಲು ಮುಂದಾಗಿದ್ದರಿಂದ, ಮಂಜು ನಾಯ್ಕ ತನ್ನ ಹಣ ಮತ್ತು ಬಂಗಾರ ಮರಳಿ ಕೊಡುವಂತೆ ಕೇಳಿಕೊಂಡಿದ್ದ.

ಆದರೆ ಯುವತಿಯ ಕಡೆಯವರು ಹಣ ನೀಡದೆ, ಮಂಜುನಾಯ್ಕಗೆ ಜೀವ ಬೆದರಿಕೆ ಹಾಕಿದ್ದರು. ಮೇ 29ರಂದು ಅವರ ಸಹೋದರ ಸುರೇಶ ನಾಯ್ಕನನ್ನು ಕರೆದೊಯ್ದು ‘ನಿಮ್ಮ ಅಣ್ಣ ಇರುವ ಜಾಗ ತೋರಿಸು’ ಎಂದು ಹೊನ್ನಾಳಿ ತಾಲ್ಲೂಕಿನ ಹೊಸ ಜೋಗ ಮತ್ತು ಶಿರಾಳಕೊಪ್ಪದಲ್ಲಿ ಅಲೆದಾಡಿಸಿದ್ದರು. ಕಾರು ವಶಪಡಿಸಿಕೊಂಡು ಅವನಿಗೂ ಜೀವ ಬೆದರಿಕೆ ಹಾಕಿದ್ದರು. 

ಕಾರು ಓಡಿಸಿ ಜೀವನ ನಡೆಸುತ್ತಿದ್ದ ಸುರೇಶ ನಾಯ್ಕ ಮನನೊಂದು ಹಂಸಭಾವಿಯ ಹೊರವಲಯದಲ್ಲಿ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಅವನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಈ ಕುರಿತು ಆರೋಪಿಗಳಾದ ರಾಜೇಶ್ವರಿ ಲಮಾಣಿ, ರುದ್ರಪ್ಪ ಲಮಾಣಿ, ಚೇತನ ಲಮಾಣಿ, ಪಾರಿಬಾಯಿ ಲಮಾಣಿ, ರಘು ಲಮಾಣಿ, ರಾಜ ಲಮಾಣಿ ಅವರ ಮೇಲೆ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT