ರಾಣೆಬೆನ್ನೂರು: ತಾಲ್ಲೂಕಿನ ಹರನಗಿರಿ ಗ್ರಾಮದ ದಲಿತ ಕಾಲೊನಿಯಲ್ಲಿ ಅಳವಡಿಸಿದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಫ್ಲೆಕ್ಸ್, ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಸೋಮವಾರ ತಡರಾತ್ರಿ ರಾತ್ರಿ ಹರಿದು ಹಾಕಿದ್ದನ್ನು ಖಂಡಿಸಿ ಅಲ್ಲಿನ ನಿವಾಸಿಗಳು ಮಂಗಳವಾರ ಬೆಳಿಗ್ಗೆ ಮುಖ್ಯರಸ್ತೆಗೆ ಮುಳ್ಳು ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.

ಯುವ ಮುಖಂಡ ಉಚ್ಚೆಂಗೆಪ್ಪ ಪುಟ್ಟಪ್ಪನವರ ಮಾತನಾಡಿ, ಹರನಗಿರಿ ಗ್ರಾಮದ ದಲಿತ ಕಾಲೊನಿಯಲ್ಲಿ ಅನೇಕ ವರ್ಷಗಳಿಂದ ಅಂಬೇಡ್ಕರ್ ಅವರ ನಾಮಫಲಕವನ್ನು ಅಳವಡಿಸಲಾಗಿತ್ತು. ಯಾವಾಗಲೂ ಇಂತಹ ದುರ್ಘಟನೆ ನಡೆದಿದ್ದಿಲ್ಲ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಇಂತಹ ನೀಚ ಕೃತ್ಯ ವ್ಯಸಗಿದ್ದಾರೆ ಎಂದು ದೂರಿದರು.

ಈ ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಲೋಕೇಶ್.ಜೆ ಭೇಟಿ ನೀಡಿ ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ನಗರ ಠಾಣೆ ಸಿಪಿಐ ಶಂಕರ್ ಹಾಗೂ ಗ್ರಾಮೀಣ ಪಿಎಸ್ಐ ರಾಮಚಂದ್ರ ನಿಂಗಜ್ಜೇರ ಇದ್ದರು.

ಗುತ್ಯಪ್ಪ ಪುಟ್ಟಮ್ಮನವರ, ನಾಗಪ್ಪ ಪುಟ್ಟಪ್ಪನವರ, ಹೊನ್ನಪ್ಪ ಚಿಕ್ಕಪ್ಪನವರ, ಸಾವಿತ್ರಮ್ಮ ಚೌಡಪ್ಪನವರ, ಗ್ಯಾನಪ್ಪ ಕೆಂಚಮ್ಮನವರ, ಭೀಮಪ್ಪ ಹಲಗೇರಿ, ರತ್ನವ್ವ ಕೆಂಚಪ್ಪನವರ, ಅಂಜಪ್ಪ ಪುಟ್ಟಪ್ಪನವರ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.