ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ, ಕಲುಷಿತ ರಾಜಕಾರಣ ತಡೆಗೆ ಮತ ಭೀಕ್ಷೆ ನೀಡಿ: ದಿಂಗಾಲೇಶ್ವರ ಸ್ವಾಮೀಜಿ

ಶಿಗ್ಗಾವಿಯಲ್ಲಿ ಭಕ್ತರ ಸಭೆ
Published 14 ಏಪ್ರಿಲ್ 2024, 16:26 IST
Last Updated 14 ಏಪ್ರಿಲ್ 2024, 16:26 IST
ಅಕ್ಷರ ಗಾತ್ರ

ಶಿಗ್ಗಾವಿ: ಮಠ, ಮಂದಿರಗಳ ಸ್ವಾಮೀಜಿಗಳು ಪರಂಪರಾಗತವಾಗಿ ಅನ್ನದಾಸೋಹ, ಅಕ್ಷರ ದಾಸೋಹಗಳನ್ನು ನಡೆಸಲು ಭೀಕ್ಷೆ ನೀಡಿ ನಾಡಿನ ಶ್ರೇಯೋಭಿವೃದ್ಧಿ ಬಯಸಿದ್ದೀರಿ. ಈಗ ದೇಶದ ರಕ್ಷಣೆಗಾಗಿ, ಭ್ರಷ್ಟ, ಕಲುಷಿತ ರಾಜಕಾರಣ ತಡೆಗೆ ಮತ ಭೀಕ್ಷೆ ನೀಡಬೇಕು ಎಂದು ಧಾರವಾಡ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಶಿರಹಟ್ಟಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಭಾನುವಾರ ನಡೆದ ಭಕ್ತ ಸಭೆಯಲ್ಲಿ ಮಾತನಾಡಿದ ಅವರು, ಅಹಂ ಭಾವನೆ ಮನುಷ್ಯನ ನಾಶಕ್ಕಾಗಿ ಎಂಬುವುದನ್ನು ಮರೆಯಬಾರದು. ಭ್ರಷ್ಟಾಚಾರ ತಾಂಡವಾಡುವಾಗ ಎದುರಿಸಲು ಭಕ್ತರು ನೀಡಿದ ಶಕ್ತಿ ಚುನಾವಣೆಗೆ ತಂದಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಲಿಂಗಾಯತ ನಾಯಕರಿಗೆ, ಜನರನ್ನು ಅವನತಿಗೊಳಿಸಿದ್ದಾರೆ. ಮಠಮಂದಿರಗಳನ್ನು ಅವನತಿಗೊಳಿಸಿದ್ದಾರೆ. ದೀನದಲಿತರನ್ನು, ಅಲ್ಪಸಂಖ್ಯಾತರನ್ನು ತುಳಿಯುವ ಕೆಲಸ ಮಾಡಿದ್ದಾರೆ. ಫೋನ್ ಮೂಲಕ ಕೆಲಸ ಮಾಡಬೇಕೆಂದು ಕೇಳಿದಾಗ ನಿಮಗೆ ಲಿಂಗಾಯತ ನಾಯಕರಿಲ್ಲವೇ ಎಂದು ಕೆಳಮಟ್ಟದ ಜಾತಿಯ ಮಾತುಗಳನ್ನು ಮಾತನಾಡಿದ್ದಾರೆ. ಅಂತ ಮೋಸ ರಾಜಕಾರಣಿಗೆ ತಕ್ಕ ಪಾಠ ಕಲಿಸಲು ಚುನಾವಣೆ ಇಳಿಯಬೇಕಾಗಿದೆ ಎಂದರು.

ಕಾಂಗ್ರೆಸ್, ಬಿಜೆಪಿ ಪಕ್ಷದ ಎರಡರಲ್ಲಿ ಭಕ್ತರಿದ್ದಾರೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವಲ್ಲಿ ಜೋಶಿ ಮೋಸ ಮಾಡಿದ್ದಾರೆ. ಹೀಗಾಗಿ ಅವರನ್ನು ನಂಬಬೇಡಿ ಎಂದಿದ್ದೇನೆ. ಬಹುಸಂಖ್ಯಾತ ಕುರಬರಿಗೆ, ರಡ್ಡೆರಿಗೆ ಟಿಕೆಟ್ ನೀಡುವಲ್ಲಿ ವಂಚನೆ ಮಾಡಿದೆ ಎಂದು ಜೋಶಿ ವಿರುದ್ಧ ಹರಿಹಾಯ್ದರು.

ಸಾಹಿತಿ ಎ.ಕೆ.ಆದವಾನಿಮಠ, ಮುಖಂಡರಾದ ಫಕ್ಕೀರಪ್ಪ ಸಂಗಣ್ಣವರ, ಸಿ.ಎಸ್.ಮತ್ತಿಗಟ್ಟಿ, ಚನ್ನಬಸಪ್ಪ ಪಾಟೀಲ, ನಿಂಗಪ್ಪ ಬಾಕರ್ಿ, ಬಸಲಿಂಗಪ್ಪ ನರಗುಂದ, ನವೀನ ಕಲ್ಲೋಳಿಮಠ, ಮಹೇಶ ತಳವಾರ, ಐ.ವಿ.ಪಾಟೀಲ, ಶರಣಪ್ಪ ಕಿವುಡನವರ, ಮಾತನಾಡಿದರು. ಮುಖಂಡರಾದ ಬಸಪ್ಪ ಹಾವೇರಿ, ಗದಿಗೆಪ್ಪ ಶೆಟ್ಟರ, ಗಂಗಣ್ಣ ಬಡ್ಡಿ, ಫಕ್ಕೀರೇಶ ಚಿಕ್ಕಮಠ, ಮುತ್ತಣ್ಣ ಗುಡಗೇರಿ, ಗೀರೀಶಗೌಡ ಪಾಟೀಲ, ನಂದೀಶ ಯಲಿಗಾರ, ಶಶಿಧರ ಯಲಿಗಾರ, ಶಂಕರಗೌಡ ಪಾಟೀಲ, ಪ್ರಕಾಶ ಕುದರಿ, ನಿಂಗಪ್ಪ ಜವಳಿ, ಎ.ಎ.ಮುಲ್ಲಾ, ಸಿ.ಎಸ್.ಹಿರೇಮಠ, ವಿ.ಎಸ್.ಪಾಟೀಲ ಇದ್ದರು.

Quote - ‘ನೋಂದು ಬೆಂದಿರುವ ಜನತೆಗೆ ನ್ಯಾಯ ನೀಡಲು ಬಂದಿದ್ದೇನೆ. ಎಂದಿಗೂ ಸುಳ್ಳು ಆಶ್ವಾಸನೆ ಭರವಸೆ ನೀಡುವುದಿಲ್ಲ. ದೇಶದಲ್ಲಿ ಆದರ್ಶ ಸಂಸದನಾಗಿ ಕೆಲಸ ಮಾಡುತ್ತೇನೆ. ಮತವನ್ನು ದಾನ ಮಾಡಿರಿ. ಮಾರಾಟ ಮಾಡಬೇಡಿ’ ಶಿರಹಟ್ಟಿ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT