ಮಂಗಳವಾರ, ಡಿಸೆಂಬರ್ 1, 2020
21 °C

ಬಾಲಕನ ತೊಡೆ ಹೊಕ್ಕ ಗಿಡದ ಕೊಂಬೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸವಣೂರ: ತಾಲ್ಲೂಕಿನ ಕಳಸೂರ ಗ್ರಾಮದಲ್ಲಿ ಶುಕ್ರವಾರ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ ಚಂಡನ್ನು ತರಲು ಕಾಂಪೌಂಡ್‌ನಿಂದ ಜಿಗಿದ ಬಾಲಕ ಆಯತಪ್ಪಿ ಗಿಡದ ಕೊಂಬೆಯ ಮೇಲೆ ಬಿದ್ದ ಪರಿಣಾಮ ಕೊಂಬೆ ಬಾಲಕನ ತೊಡೆಯನ್ನು  ಹೊಕ್ಕಿ ಹೊರಬಂದಿದೆ. 

ಗ್ರಾಮದ ನಿವಾಸಿ ತರುಣ್‌ ವಿರೂಪಾಕ್ಷಪ್ಪ ಪೂಜಾರ (10) ಗಾಯಗೊಂಡ ಬಾಲಕ. ಬಾಲಕನಿಗೆ ತಕ್ಷಣ ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ತೊಡೆಯಲ್ಲಿ ಸೇರಿಕೊಂಡಿದ್ದ ಕೊಂಬೆಯನ್ನು ಹೊರ ತೆಗೆಯಲಾಗಿದೆ. ನಂತರ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ, ಶನಿವಾರ ಬೆಳಿಗ್ಗೆ ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.