ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಪೌರಕಾರ್ಮಿಕರ ಕಾಯಂಗೆ ಆಗ್ರಹ

Last Updated 14 ಸೆಪ್ಟೆಂಬರ್ 2021, 15:28 IST
ಅಕ್ಷರ ಗಾತ್ರ

ಹಾವೇರಿ: ಐ.ಪಿ.ಡಿ ಸಾಲಪ್ಪ ವರದಿ ಅನುಸಾರಬಿಬಿಎಂಪಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಮತ್ತು ವಿವಿಧ ಸ್ವಚ್ಛತಾ ಸಿಬ್ಬಂದಿಯನ್ನು ಕಾಯಂ ಮಾಡುವಂತೆ ಒತ್ತಾಯಿಸಿ, ತಾಲ್ಲೂಕಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು.

ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ನಾಯಕ ಐ.ಪಿ.ಡಿ ಸಾಲಪ್ಪ ಅವರ 25ನೇ ಪರಿನಿಬ್ಬಾಣ ಸ್ಮರಣಾರ್ಥ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆ ನಡೆಯಿತು.

ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ, ‘ಪೌರಕಾರ್ಮಿಕರು ಹಾಗೂ ಕಸ ಸಾಗಿಸುವ ಸ್ವಚ್ಛತಾ ಕಾರ್ಮಿಕರು ಕನಿಷ್ಠ ವೇತನ ಮತ್ತು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ.ಐ.ಪಿ.ಡಿ ಸಾಲಪ್ಪ ನೇತೃತ್ವದ ಸ್ವೀಪರ್ ಮತ್ತು ಸ್ಕ್ಯಾವೆಂಜರ್ ಜೀವನ ಮತ್ತು ಸೇವಾ ಸುಧಾರಣಾ ಸಮಿತಿಯು ಸರ್ಕಾರಕ್ಕೆ ನೀಡಿರುವ ಅಂಗೀಕೃತ ವರದಿಯ ಸರ್ಕಾರಿ ಸುತ್ತೋಲೆ ಕ್ರಮ ಸಂಖ್ಯೆ 2,5,6 ಅಂಶಗಳನ್ನು ಅನುಷ್ಠಾನಗೊಳಿಸಿ, ಆದೇಶ ಮಾಡಿದರೆ ಈ ಅವಕಾಶ ವಂಚಿತರ ಶ್ರಮಕ್ಕೆ ಸಂವಿಧಾನ ಆಶಯದಂತೆ ಸಂರಕ್ಷಣೆ ಒದಗಿಸಿದಂತಾಗುತ್ತದೆ ಎಂದರು.

ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ, ಮಾದಿಗರ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಪ್ಪ ತಗಡಿನಮನಿ, ಗ್ರಾ.ಪಂ ಅಧ್ಯಕ್ಷೆ ರೇಣುಕಾ ಕೆಂಚಲ್ಲನವರ, ವೆಂಕಟೇಶ ಬಿಜಾಪೂರ, ಬಸವಾರ ದೊಡ್ಡಮನಿ, ಸುರೇಶ ಚಲವಾದಿ, ಎನ್‌.ಟಿ. ಮಂಜುನಾಥ, ರಂಗಪ್ಪ ಮೈಲಮ್ಮನವರ, ಮಂಜಪ್ಪ ಮರೋಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT