ರಾಣೆಬೆನ್ನೂರು: ‘ಮೇ 7ರಂದು ನಡೆಯುವ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪ್ರತಿಯೊಬ್ಬ ಮತದಾರನೂ ಮತ ಚಲಾಯಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ, ಮತವನ್ನು ಮಾರಿಕೊಳ್ಳದೇ ಎಲ್ಲರೂ ನಿರ್ಭೀತಿಯಿಂದ ಮತ ಚಲಾಯಿಸಬೇಕು’ ಎಂದು ಹಾವೇರಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ್ ಬಿ. ಮುಳ್ಳಳ್ಳಿ ಹೇಳಿದರು.

ಇಲ್ಲಿಯ ನಗರಸಭೆ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ, ನಗರಸಭೆ, ತಾಲ್ಲೂಕು ಪಂಚಾಯತಿ, ನಗರದ ಎಲ್ಲ ಕಾಲೇಜುಗಳ ಎನ್‌ಎಸ್‌ಎಸ್, ಇಎಲ್‌ಸಿ, ಎನ್‌ಸಿಸಿ, ರೋವರ್ಸ್, ರೇಂಜರ್ಸ್ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಿನಿ ವಿಧಾನಸೌಧದ ಎದುರು ಜಾಥಾ ಮುಗಿದ ನಂತರ ಹಳೇ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಲಾಯಿತು. ನಂತರ ಹಾವೇರಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ್ ಬಿ. ಮುಳ್ಳಳ್ಳಿ ಅವರು ಮತದಾನದ ಪ್ರತಿಜ್ಞಾ ವಿಧಿ ಬೊಧಿಸಿದರು.

ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣವರ ಮಾತನಾಡಿ, ‘ಈ ಬಾರಿ ಮತದಾನದ ಪ್ರಮಾಣ ಶೇ 100ರಷ್ಟು ಹೆಚ್ಚಿಸಲು ಪ್ರತಿಯೊಬ್ಬ ಮತದಾರ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ ಪಿ.ಎಸ್, ಎನ್‌ಎಸ್‌ಎಸ್ ಅಧಿಕಾರಿ ಅರುಣಕುಮಾರ ಚಂದನ ಮಾತನಾಡಿದರು.

ಸಹಾಯಕ ಚುನಾವಣಾ ಅಧಿಕಾರಿ ರೇಷ್ಮಾ ಬಾನು ಕೌಸರ್, ತಹಶೀಲ್ದಾರ್ ಸುರೇಶಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ್, ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ.ರಾಜೇಶ್ವರಿ ಕದರಮಂಡಲಗಿ, ಸಹಾಯಕ ತೋಟಗಾರಿಕಾ ಹಿರಿಯ ನಿರ್ದೇಶಕ ನೂರ ಅಹಮದ್ ಹಲಗೇರಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನೀಲಕಂಠಪ್ಪ ಅಂಗಡಿ, ಕಂಬಳಿ, ರಾಜಶೇಖರ ಚಕ್ಕಿ, ಅಂಬಿಕಾ ಹೊಸಮನಿ, ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ, ಲಿಂಗರಾಜ ಸುತ್ತಕೋಟಿ, ಪರಶುರಾಮ್ ಪೂಜಾರ, ಡಿ.ವಿ. ಅಂಗೂರ, ಲತಾ ಜ್ಯೋತಿ, ಅನಸೂಯ ಕಂಬಳಿ, ಮಹೇಶ್ ಕಲಾಲ್, ಪಿ. ವಸಂತ, ಪ್ರಭು ಬಾಲೆಹೊಸೂರು, ನಿರ್ಮಲ ನಾಯಕ್, ಡೇ-ನಲ್ಮ್ ಸ್ವಸಹಾಯ ಸಂಘದ ಮಹಿಳಾ ಪ್ರತಿನಿಧಿಗಳು ಬೃಹತ್ ಜಾಥಾದಲ್ಲಿ ಭಾಗವಹಿಸಿದ್ದರು.

ಕಲಾತಂಡಗಳ ಆಕರ್ಷಣೆ: ವಿವಿಧ ಪೋಷಾಕಿನಲ್ಲಿ ಜಾಥಾದಲ್ಲಿ ಭಾಗವಹಿಸಿದ್ದ ಕಲಾತಂಡದ ಕಲಾವಿದರು, ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಜಾಂಝ್ ಮೇಳದವರು ಸಂಗೀತ ಮತ್ತು ನೃತ್ಯ, ವಿದ್ಯಾರ್ಥಿಗಳು ಹಿಡಿದಿದ್ದ ಮತದಾನ ಜಾಗೃತಿ ಪ್ಲೇ ಕಾರ್ಡ್‌ಗಳು ಜನರನ್ನು ಆಕರ್ಷಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.