ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟ
Last Updated 12 ಮೇ 2022, 15:31 IST
ಅಕ್ಷರ ಗಾತ್ರ

ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಭಾರತ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಜಿಲ್ಲೆಯಾದ್ಯಂತ ಮೇ 12ರಿಂದ ಜೂನ್ 17ರವರೆಗೆ ಮಾದರಿ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಮಾದರಿ ನೀತಿಸಂಹಿತೆ ತಂಡಗಳ ರಚನೆ ಮಾಡಲಾಗಿದೆ, ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಅಧ್ಯಕ್ಷರಾಗಿದ್ದು, ತಾಲ್ಲೂಕು ವೃತ್ತ ಆರಕ್ಷಕ ನೀರಿಕ್ಷಕರು, ನಗರ, ಪಟ್ಟಣದ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ತಾಲ್ಲೂಕು ಅಬಕಾರಿ ನಿರೀಕ್ಷಕರು ಸದಸ್ಯರಾಗಿದ್ದಾರೆ.

ವಿವಿಧ ಸಮಿತಿ ತಂಡಗಳ ರಚನೆ: ಜಿಲ್ಲಾ ಮಟ್ಟದಲ್ಲಿ ಎಂ.ಸಿ.ಸಿ ತಂಡ, ಕ್ಯಾಶ್ ಸೀಜರ್ ತಂಡ, ಎಂ.ಸಿ.ಎಂ.ಸಿ ತಂಡ, ಎಂ.ಎಂ.ಸಿ. ತಂಡ , ಕಂಟ್ರೋಲ್ ರೂಂ, ಸೋಷಿಯಲ್ ಮಿಡಿಯಾ, ಕೋವಿಡ್-19 ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಎಂ.ಸಿ.ಸಿ ತಂಡ, ಎಫ್.ಎಸ್.ಟಿ ತಂಡ, ವಿ.ಎಸ್.ಟಿ ತಂಡ, ವಿ.ವಿ.ಟಿ ತಂಡ ಹಾಗೂ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮತಗಟ್ಟೆಗಳ ವಿವರ:

ಶಿಗ್ಗಾವಿ ತಾಲ್ಲೂಕಿನಲ್ಲಿ 3, ಸವಣೂರು– 1, ಹಾನಗಲ್-4, ಹಾವೇರಿ-3, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ತಲಾ 2 ಹಾಗೂ ರಾಣೆಬೆನ್ನೂರು ತಾಲ್ಲೂಕಿನಲ್ಲಿ 9 ಮತಗಟ್ಟೆಗಳು ಸೇರಿ ಒಟ್ಟು 26 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಶಿಗ್ಗಾಂವ ತಾಲ್ಲೂಕಿನಲ್ಲಿ 407 ಮತದಾರರು, ಸವಣೂರ ತಾಲ್ಲೂಕಿನಲ್ಲಿ 278, ಹಾನಗಲ್ ತಾಲ್ಲೂಕಿನಲ್ಲಿ666, ಹಾವೇರಿ ತಾಲ್ಲೂಕಿನಲ್ಲಿ903, ಬ್ಯಾಡಗಿ ತಾಲ್ಲೂಕಿನಲ್ಲಿ446, ಹಿರೇಕೆರೂರು ತಾಲ್ಲೂಕಿನಲ್ಲಿ485, ರಟ್ಟಿಹಳ್ಳಿ ತಾಲ್ಲೂಕಿನಲ್ಲಿ254 , ರಾಣೆಬೆನ್ನೂರು ತಾಲ್ಲೂಕಿನಲ್ಲಿ1191 ಮತದಾರರಿದ್ದಾರೆ.

ಕೋವಿಡ್-19 ಮುಂಜಾಗ್ರತಾ ಕ್ರಮ:

ಅಭ್ಯರ್ಥಿಗಳಿಗೆ, ಚುನಾವಣಾ ಏಜೆಂಟರುಗಳಿಗೆ, ಪೋಲಿಂಗ್ ಏಜೆಂಟರುಗಳಿಗೆ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆಗಳಾಗಿರಬೇಕು. ಒಂದು ವೇಳೆ ಎರಡೂ ಡೋಸ್ ಲಸಿಕೆಗಳಾಗಿರದಿದ್ದಲ್ಲಿ ಮತದಾನದ ದಿನ ಮತ್ತು ಮತ ಎಣಿಕೆ ದಿನಕ್ಕೆ ಅನ್ವಯವಾಗುವಂತೆ 48 ಗಂಟೆಗಳ ಹಿಂದಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ.

ಒಂದೇ ಡೋಸ್ ಲಸಿಕೆಯಾಗಿದ್ದಲ್ಲಿ ಮತದಾನದ ದಿನ ಮತ್ತು ಮತ ಎಣಿಕೆ ದಿನಕ್ಕೆ ಅನ್ವಯವಾಗುವಂತೆ 72 ಗಂಟೆಗಳ ಹಿಂದಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಮತಪತ್ರಚಾರದ ವೇಳೆಯಲ್ಲಿ ಭೌತಿಕ ಅಂತರ, ಸ್ಯಾನಿಟೇಜರ್ ಮತ್ತು ಮಾಸ್ಕ್‌ ಬಳಕೆ ಕಡ್ಡಾಯವಾಗಿದೆ. ಪ್ರಚಾರಕ್ಕೆ ಅಭ್ಯರ್ಥಿ ಒಳಗೊಂಡಂತೆ ಕೇವಲ ಐದು ಜನರಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

**

ಚುನಾವಣೆ ವೇಳಾಪಟ್ಟಿ

ಮೇ 19;ಚುನಾವಣೆ ಅಧಿಸೂಚನೆ

ಮೇ 26;ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಮೇ 27;ನಾಮಪತ್ರಗಳ ಪರಿಶೀಲನೆ

ಮೇ 30;ನಾಮಪತ್ರ ಹಿಂಪಡೆಯಲು ಕಡೆಯ ದಿನ

ಜೂನ್ 13;ಮತದಾನ

ಜೂನ್ 15;ಮತ ಎಣಿಕೆ

**

ಮತದಾರರ ವಿವರ

3263;ಪುರುಷ ಮತದಾರರು

1363;ಮಹಿಳಾ ಮತದಾರರು

4630;ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT