ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರಲ್ಲಿ ಬಾರಕೋಲು ಚಳವಳಿ

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ
Published 31 ಅಕ್ಟೋಬರ್ 2023, 5:43 IST
Last Updated 31 ಅಕ್ಟೋಬರ್ 2023, 5:43 IST
ಅಕ್ಷರ ಗಾತ್ರ

ರಾಣೆಬೆನ್ನೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರಾಣೆಬೆನ್ನೂರಿನಲ್ಲಿ ನವಯುಗ ತಂಡದ ಸಾರಥಿ ಸಂತೋಷಕುಮಾರ ಪಾಟೀಲ ಹಾಗೂ ನೂರಾರು ಅಭಿಮಾನಿಗಳು ಬಾರಕೋಲು ಚಳವಳಿ ಮೂಲಕ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಮಿನಿ ವಿಧಾನ ಸೌಧಕ್ಕೆ ತೆರಳಿ ಶಿರಸ್ತೇದಾರ ಮನಿಯಾರ ಅವರಿಗೆ ಮನವಿ ಸಲ್ಲಿಸಿದರು.

ಬಾರಕೋಲು ಚಳವಳಿಯ ಪ್ರತಿಭಟನಾ ಮೆರವಣಿಗೆಯು ನಗರದ ಹೆಸ್ಕಾಂ ಗಣೇಶ ದೇವಸ್ಥಾನದಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್‌ ಕಚೇರಿಗೆ ತೆರಳಿತು. ನೂರಾರು ರೈತರು ಬಾರಕೋಲು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷಕುಮಾರ ಐ. ಪಾಟೀಲ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸರ್ಕಾರವನ್ನು ಎಚ್ಚರಿಸಲು ಬಾರಕೋಲು ಚಳವಳ್ಳಿ ಹಮ್ಮಿಕೊಳ್ಳಲಾಗಿದೆ. ರಾಣೆಬೆನ್ನೂರ ತಾಲ್ಲೂಕನ್ನು ಬರಗಾಲ ಪೀಡಿತವೆಂದು ಸರ್ಕಾರ ಘೋಷಿಸಿದ್ದು, ಇದರಿಂದ ರೈತರಿಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಬರಗಾಲ ಘೋಷಣೆಯಿಂದ ಇಂದಿಗೂ ಏನು ಪ್ರಯೋಜನವಾಗಿಲ್ಲ. ಬೆಳೆ ವಿಮೆ ಬಿಟ್ಟರೆ ರೈತರಿಗೆ ಸರ್ಕಾರ ಏನು ಪರಿಹಾರ ನೀಡಿದೆ ಎಂದು ಆರೋಪಿಸಿದರು.

ರೈತರಿಗೆ ಬ್ಯಾಂಕಗಳು ಬೆಳೆ ಸಾಲ ಮರುಪಾವತಿಸಲು ನೋಟಿಸ್ ಮೂಲಕ ಒತ್ತಾಯಿಸಬಾರದು. ಮುಂದಿನ ವರ್ಷ ಮುಂಗಾರು ಬೆಳೆ ಬರುವವರೆಗೆ ಸಾಲ ತುಂಬಲು ಅವಕಾಶ ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ರಾತ್ರಿ ಕೊಡುವ ತ್ರೀ ಪೇಸ್ ವಿದ್ಯುತ್‌ನ್ನು ಹಗಲು ಹೊತ್ತಿನಲ್ಲಿ 8 ತಾಸು ವಿದ್ಯುತ್ ಕೊಡಬೇಕು ಎಂದು ಒತ್ತಾಯಿಸಿದರು.

ನವಯುದ ಸಂಘಟನೆ ಅಧ್ಯಕ್ಷ ಯುವರಾಜ ಬಾರಾಟಕ್ಕೆ, ಪ್ರಭುಸ್ವಾಮಿ ಕರ್ಜಗಿಮಠ, ರಾಮನಗೌಡ, ಮಂಜುನಾಥ ಎಂ.ಬಿ., ಶಿವಾನಂದ, ಅಣ್ಣಪ್ಪ ತಿಮ್ಮೇನಹಳ್ಳಿ, ಜೆ.ಎಚ್‌.ನರಸಗೊಂಡರ,ಚಂದ್ರಪ್ಪ ಬಣಕಾರ, ಕೆ.ಜಿ. ಅಟವಾಳಗಿ, ಬಸವರಾಜ ರೊಡ್ಡನವರ, ಹನುಮಂತರಾಜು ಚನ್ನಗೌಡ್ರ, ಸೋಮಣ್ಣ ಹಲಗೇರಿ, ಸೋಮು ಸಂಗಾಪುರ, ಗುಡ್ಡೇಶ್ ನಿಟ್ಟೂರ್, ಕಿರಣ ಬುಳ್ಳನಗೌಡ್ರ, ಗುಡ್ಡೇಶ ನಿಟ್ಟೂರ, ರಾಜು ಹೊಂಬರಡಿ, ಮಲ್ಲಿಕಾರ್ಜುನ ಮಾಸಣಗಿ, ಗಂಗಾಧರ ಬೂದನೂರು, ರಮೇಶ್ ಹೊನ್ನಾಳಿ, ಶಂಕರಗೌಡ ಗಂಗನಗೌಡ್ರು, ಪ್ರಭುಗೌಡ ಚನ್ನಗೌಡ್ರ, ಹನುಮಂತರಾಜ್ ಚನ್ನಗೌಡರ. ಈರಣ್ಣ ಬುಡಪನಹಳ್ಳಿ, ತಿಮ್ಮನಗೌಡ ಪಾಟೀಲ, ಗಣೇಶ ನಾಡಗೇರ, ದೇವರಾಜ, ಡಿ.ಎಚ್‌. ದೊಡ್ಡಮನಿ, ಬಸನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT