ಗುರುವಾರ , ಜೂನ್ 24, 2021
24 °C

ರಾಣೆಬೆನ್ನೂರು: ಕೃಷಿ ಕಾಯ್ದೆ ವಾಪಸ್ ಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶನಿವಾರ ರಾಣೆಬೆನ್ನೂರಿನ ಶಾಸಕ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಅಗಸೀಬಾಗಿಲ ಮಾತನಾಡಿ, ರೈತರು ಹೋರಾಟವನ್ನು ಮುಂದುವರಿಸಿ ಕಾಯ್ದೆ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೋರಾಟದ ಭಾಗವಾಗಿ ಬಿಜೆಪಿ ಶಾಸಕರು, ಸಂಸದರ ಮನೆ ಮುಂದೆ ಧರಣಿ ಮಾಡಲಾಗಿದೆ ಎಂದರು.

ಸುರೇಶ ಧುಳೆಹೊಳಿ, ಶಂಕ್ರಪ್ಪ ಮೆಣಸಿನಹಾಳ, ಲೋಕೇಶ ಎಲಿಗಾರ, ನಾಗಪ್ಪ ಎಲಿಗಾರ, ಮಹೇಶಪ್ಪ ಕುಪ್ಪೇಲೂರ, ಶಿದ್ದಪ್ಪ ಕುಪ್ಪೇಲೂರ, ಮಲ್ಲಪ್ಪ ಎಲಿಗಾರ, ಜಗದೀಶಗೌಡ ಪಾಟೀಲ, ಬಸವಂತಪ್ಪ ಅಜ್ಜನವರ, ರಮೇಶಗೌಡ ಕರಬಸಳ್ಳವರ, ಸುರೇಶ ಮೈದೂರ, ಮಂಜುನಾಥ ಕಿರೆಸೂರ, ಬಸರಾಜಪ್ಪ ಕಡೂರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.