ಬುಧವಾರ, ಫೆಬ್ರವರಿ 26, 2020
19 °C

₹5 ಲಕ್ಷ ಬೆಳೆ ಬೆಂಕಿಗೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಡಸ: ಗ್ರಾಮದ ರೈತರಾದ ಪರಸಪ್ಪ ಧರಿಯಪ್ಪ ಬಾಳಿಕಾಯಿ ಇವರ 11 ಎಕರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳದ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು ₹5 ಲಕ್ಷ  ಮೌಲ್ಯದ ಫಸಲು ಸುಟ್ಟು ಭಸ್ಮವಾಗಿದೆ.

ಇದೇ ವೇಳೆ ಜಮೀನಿನ ಅಕ್ಕ ಪಕ್ಕದಲ್ಲಿದ್ದ ರೈತರಾದ ಮಂಜುನಾಥ ನಂಜಪ್ಪನವರ, ಚಂದ್ರು ಗಾಣಿಗೇರ, ಚನ್ನಪ್ಪ ಬಾಳಿಕಾಯಿ, ಪದ್ಮರಾಜ ದ್ಯಾಮಾಪುರ, ಪರಸಪ್ಪ ತಿಮ್ಮಾಪುರ, ಮಲ್ಲೇಶ ಬಾಳಿಕಾಯಿ, ನಿಂಗಪ್ಪ ಹಡಪದ, ಭರತೇಶ ಹಳ್ಳಿಯವರ ಮತ್ತು ಗ್ರಾಮಸ್ಥರು ಬೆಂಕಿಯನ್ನು ಆರಿಸಲು ಹರಸಾಹಸಪಟ್ಟರು. ಈ ಕುರಿತು ತಡಸ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)