ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಳುವರಿ ಆಧರಿಸಿ ದರ ನಿರ್ಧರಿಸಿ’

ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಹೇಳಿಕೆ
Last Updated 30 ನವೆಂಬರ್ 2020, 10:21 IST
ಅಕ್ಷರ ಗಾತ್ರ

ಹಾವೇರಿ: ‘ಪ್ರತಿ ವರ್ಷ ಕಬ್ಬಿನಲ್ಲಿರುವ ಸಕ್ಕರೆ ಇಳುವರಿಯನ್ನು ಪರಿಶೀಲನೆ ಮಾಡಬೇಕು. ಇಳುವರಿಯ ಆಧಾರದ ಮೇಲೆ ಯೋಗ್ಯ ಬೆಲೆಯನ್ನು ರೈತರಿಗೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸಕ್ಕರೆ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ’ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಗೂರ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರಾದ ಜಿ.ಎಂ.ಶುಗರ್ಸ್‌ನವರು, ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸುತ್ತಾರೆ. ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಇದ್ದಾಗ ಶೇ 10ರಷ್ಟು ಸಕ್ಕರೆ ಇಳುವರಿ ಬರುತ್ತಿತ್ತು. ಆದರೆ, 2007–08ರಿಂದ ಶೇ 9.5ರಷ್ಟು ಮಾತ್ರ ಇಳುವರಿ ತೋರಿಸುತ್ತಿದ್ದಾರೆ. ಇದರಿಂದ ಕಬ್ಬಿನ ದರದಲ್ಲಿ ವ್ಯತ್ಯಾಸವಾಗುತ್ತಿದೆ ಮತ್ತು ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪ ಮಾಡಿದರು.

‘ಒಂದು ಟನ್‌ ಕಬ್ಬಿಗೆ ಮೊದಲು ಒಂದು ಕ್ವಿಂಟಲ್‌‌ ಸಕ್ಕರೆ ಬರುತ್ತಿತ್ತು. ಈಗ ಅದನ್ನು ಸಂಗೂರ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು 95 ಕೆ.ಜಿ. ಬರುತ್ತದೆ ಎಂದು ಲೆಕ್ಕ ತೋರಿಸುವ ಮೂಲಕ ಪ್ರತಿ ಟನ್‌ಗೆ ₹100 ಉಳಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿ ಲಾಭವಾಗುತ್ತಿದೆ. ಹೆಚ್ಚು ಇಳುವರಿ ಕೊಡುವ ತಳಿಯನ್ನು ಪರಿಚಯಿಸಲಾಗಿದೆ ಮತ್ತು ಅತ್ಯಾಧುನಿಕ ಯಂತ್ರ ಅಳವಡಿಸಲಾಗಿದೆ ಎಂದು ಕಾರ್ಖಾನೆಯವರೇ ಹೇಳುತ್ತಾರೆ. ಹಾಗಾದರೆ ಇಳುವರಿ ಏಕೆ ಕಡಿಮೆ ಬರುತ್ತಿದೆ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿದ ದರ ₹2750 ಮತ್ತು ಹೆಚ್ಚುವರಿಯಾಗಿ ₹35 ಸೇರಿಸಿ, ಪ್ರತಿ ಟನ್‌ಗೆ ₹2785 ಕೊಡುವ ಬದಲಾಗಿ ಸಂಗೂರ ಕಾರ್ಖಾನೆಯವರು ರೈತರಿಗೆ ₹2750 ಕೊಡಲು ಒಪ್ಪಿದ್ದಾರೆ.ಕಾರ್ಖಾನೆಯವರು ತಮ್ಮದೇ ಆದ ಕಬ್ಬು ಬೆಳೆಗಾರರ ಸಂಘವನ್ನು ಕಟ್ಟಿಕೊಂಡಿದ್ದು ಮತ್ತು ಕಬ್ಬು ಪೂರೈಕೆ ಮಾಡುವ ಗುತ್ತಿಗೆದಾರರನ್ನು ನೇಮಿಸಿಕೊಂಡಿದ್ದಾರೆ. ಈ ಸಂಘವು ಕಾರ್ಖಾನೆಯ ಗುತ್ತಿಗೆದಾರರಿಗೆ ₹3ರಿಂದ 4 ಕೋಟಿ ಲಾಭ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್‌.ಎಂ. ಚಿಕ್ಕಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT