ಬ್ಯಾಡಗಿ: ಪಟ್ಟಣದ ಸ್ನೇಹ ಸದನದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರದದಲ್ಲಿ ಒಟ್ಟು 43 ಜನರ ನೇತ್ರ ತಪಾಸಣೆ ನಡೆಸಿ, ಈ ಪೈಕಿ 24 ಜನ ಶಿಬಿರಾರ್ಥಿಗಳನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ರೋಟರಿ ಕ್ಲಬ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಪಡಿಸಿದ್ದ ಶಿಬಿರಕ್ಕೆ ನೇತ್ರ ಪರೀಕ್ಷಕ ಡಾ ಸುನೀಲ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕಣ್ಣು ದೇಹದ ಪ್ರಮುಖ ಅಂಗವಾಗಿದ್ದು, ನಿರ್ಲಕ್ಷ್ಯ ತೋರದೆ ಪ್ರತಿ ಆರು ತಿಂಗಳಿಗೊಮ್ಮೆಯಾದರೂ ಕಣ್ಣಿನ್ನು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. ದೃಷ್ಠಿ ದೋಷಗಳನ್ನು ಸರಿ ಪಡಿಸಿಕೊಳ್ಳಲು ನೇತ್ರ ತಜ್ಞರನ್ನು ಸಂಪರ್ಕಿಸಿ ಸರಿ ಪಡಿಸಿಕೊಳ್ಳಬಹುದು. ಹೆಚ್ಚು ತರಕಾರಿ ಹಾಗೂ ವಿಟಮಿನ್ ಎ ಅಂಶವಿರುವ ಆಹಾರದ ಸೇವೆನೆಯಿಂದ ಮಾತ್ರ ದೃಷ್ಠಿ ದೋಷ ತಡೆಯಲು ಸಾಧ್ಯವಿದೆ ಎಂದರು.

ಈ ವೇಳೆ ಸ್ನೇಹ ಸದನದ ನಿರ್ದೇಶಕಿ ರೂಪಾ, ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ, ರೋಟರಿ ಕ್ಲಬ್ಬಿನ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ರೋಟರಿ ಕ್ಲಬ್ ಮಾಜಿ ಅಸಿಸ್ಟಂಟ್ ಗವರ್ನರ್ ಮಂಜುನಾಥ ಉಪ್ಪಾರ, ಅಧ್ಯಕ್ಷ ಅನಿಲಕುಮಾರ, ಪದಾಧಿಕಾರಿಗಳಾದ ಆನಂದಗೌಡ ಸೊರಟೂರ, ನಿರಂಜನ ಶೆಟ್ಟಿಹಳ್ಳಿ, ಕಿರಣ ಮಾಳೇನಹಳ್ಳಿ, ಮಾಲತೇಶ ಕಲ್ಯಾಣಿ, ಪವಾಡಪ್ಪ ಆಚನೂರ, ಬಸವರಾಜ ಸುಂಕಾಪುರ, ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಅರುಣ, ರವಿಕುಮಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.