ಮಂಗಳವಾರ, ನವೆಂಬರ್ 29, 2022
21 °C

ಸ್ವಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ಜುಲೈ 22ರಂದು ಚಂಡಿಗಢದಲ್ಲಿ ಹೃದಯಘಾತದಿಂದ ಮೃತಪಟ್ಟ ತಿಮ್ಮಾಪೂರ ಗ್ರಾಮದ ಬಿಎಸ್‌ಎಫ್ ಯೋಧ ಮಲ್ಲಿಕಾರ್ಜುನಯ್ಯ ಸುತ್ತೂರಮಠ ಅವರ ಪಾರ್ಥಿವ ಶರೀರವನ್ನು ಶನಿವಾರ ಗ್ರಾಮಕ್ಕೆ ತರಲಾಯಿತು. ಗ್ರಾಮಸ್ಥರು, ಗಣ್ಯರು ಅಂತಿಮ ದರ್ಶನ ಪಡೆದರು.

ಗುತ್ತಲದ ರುದ್ರಮುನಿ ಸ್ವಾಮೀಜಿ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಸಾವಿರಾರು  ಮಂದಿ ‘ಅಮರ ರಹೇ ಮಲ್ಲಿಕಾರ್ಜುನಯ್ಯ’ ‘ಭಾರತ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು. ಶಾಸಕ ನೆಹರು ಓಲೇಕಾರ, ತಹಶೀಲ್ದಾರ್‌ ಶಂಕರ ಜಿ.ಎಸ್. ಸೇರಿದಂತೆ ವಿವಿಧ ಮಠಾಧೀಶರು ಅಂತಿಮ ನಮನ ಸಲ್ಲಿಸಿದರು.

ಯೋಧನ ಸ್ವಗ್ರಾಮ ತಿಮ್ಮಾಪೂರದಲ್ಲಿ ಸರತಿಯಲ್ಲಿ ನಿಂತು ಜನರ ಅಂತಿಮ ದರ್ಶನ ಪಡೆದರು. ಬಿಎಸ್‌ಎಫ್ ಯೋಧರು ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಪತ್ನಿ,ಪುತ್ರ, ಪುತ್ರಿ ಸೇರಿದಂತೆ ಕುಟುಂಬದವರು ಮತ್ತು ತಿಮ್ಮಾಪೂರ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.  ಮಾಜಿ ಸಚಿವ ರುದ್ರಪ್ಪ ಲಮಾಣಿ, ಸಿಪಿಐ ನಾಗಮ್ಮಕೆ., ಪಿಎಸ್‌ಐ ಜಗದೀಶ ಜಿ., ಪಿಎಸ್‌ಐ ಮಹಾಂತೇಶ ಮಣ್ಣನವರ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು