ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೀನುಗಾರಿಕೆಯಿಂದ ಉತ್ತಮ ಲಾಭ: ಕೊಪ್ಪದ

Published 10 ಜುಲೈ 2024, 15:25 IST
Last Updated 10 ಜುಲೈ 2024, 15:25 IST
ಅಕ್ಷರ ಗಾತ್ರ

ಚಿಕ್ಕೇರೂರ (ಹಂಸಬಾವಿ): ಮೀನುಗಾರಿಕೆ ಉತ್ತಮ ಆದಾಯ ತರುವ ಉದ್ಯಮವಾಗಿದೆ ಹಾಗೂ ಕಂಪನಿಗಳು ಮತ್ತು ಸಹಕಾರಿ ಸಂಘಗಳು ಮೀನಿನ ಉತ್ಪನ್ನಗಳನ್ನ ಮೌಲ್ಯವರ್ಧನೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಹಾಗೂ ಇಲಾಖೆಯ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಕೊಪ್ಪದ ಹೇಳಿದರು.

ಸಮೀಪದ ಚಿಕ್ಕೇರೂರಿನಲ್ಲಿ ಮೀನುಗಾರಿಕೆ ಇಲಾಖೆ ಹಾವೇರಿ, ಸ್ಕೂಡ್ ವೇಸ್ ಸಂಪನ್ಮೂಲ ಸಂಸ್ಥೆ ಶಿರಸಿ ಹಾಗೂ ಕಾರ್ಪ್ ಫಿಶ್ ರೈತ ಉತ್ಪಾದಕ ಕಂಪನಿ ಚಿಕ್ಕೇರೂರ್ ಇವರು ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಾಯಕ ಮೀನುಗಾರಿಕಾ ನಿರ್ದೇಶಕ ಎಸ್.ಪಿ. ದಂದೂರ ಮಾತನಾಡಿ, ಮೀನುಗಾರಿಕೆ ಕೃಷಿ ಒಂದು ಆರ್ಥಿಕ ಸ್ವಾವಲಂಬನೆ ಸಾಧಿಸಲು, ಮೀನುಗಾರಿಕೆ ಉದ್ಯಮ ಆರಂಭಿಸಲು ನವ ಉದ್ಯಮಿಗಳು ಮುಂದಾಗಬೇಕೆಂದು ತಿಳಿಸಿದರು.

ಸ್ಕೂಡ್ ವೆಸ್ ಸಂಪನ್ಮೂಲ ಸಂಸ್ಥೆಯ ಜಿಲ್ಲಾ ಸಂಯೋಜಕ ಜಗದೀಶ್ ಮಡಿವಾಳರ್, ಗದಗ ಜಿಲ್ಲಾ ಸಂಯೋಜಕ ನರಸಪ್ಪ ಮಡಿವಾಳ, ಕಂಪನಿಯ ಅಧ್ಯಕ್ಷ ಸಿಕಂದರ್ ಎಂ. ಗಾಸಿ, ಸಹಾಯಕ ಮೀನುಗಾರಿಕಾ ನಿರ್ದೇಶಕ ವಿನಾಯಕ ಬೇವಿನಹಳ್ಳಿ ಮಾತನಾಡಿದರು.

ಮೀನುಗಾರಿಕೆ ಸಹಕಾರಿ ಸಂಘದ ಪ್ರವರ್ತಕ ರಿಯಾಜ್ ಘಾಸಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT