ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಕೋಳಿ ವ್ಯಾಪಾರ ಕುಸಿತ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಚಾರ, ವ್ಯಾಪಾರಕ್ಕೆ ಧಕ್ಕೆ
Last Updated 5 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹಾವೇರಿ: ಚೀನಾದಲ್ಲಿ ಪತ್ತೆಯಾದ ಕೋವಿಡ್‌–19 ವೈರಸ್‌ನಿಂದಾಗಿ ನಗರದಲ್ಲಿ ಕೋಳಿ ಮಾಂಸದ ವ್ಯಾಪಾರ ಪಾತಾಳಕ್ಕೆ ಕುಸಿದಿದೆ.

ಬಿಸಿಲು ಹೆಚ್ಚಾದಾಗ ಕೋಳಿ ಮಾಂಸ ತಿನ್ನುವವರ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಆದರೆ, ಈ ಬಾರಿ ಕೋವಿಡ್‌–19 ವೈರಸ್‌ನಿಂದ ಮಾಂಸ ಖರೀದಿಸುವವರಿಲ್ಲದೆ, ಬೆಲೆ ಸಂಪೂರ್ಣ ಇಳಿಕೆಯಾಗಿದೆ ಎಂದು ಕೋಳಿ ಫಾರ್ಮ್‌ ಮಾಲೀಕರು ಬೇಸರ ವ್ಯಕ್ತಪಡಿಸಿದರು.

ಹಾವೇರಿ ನಗರದಲ್ಲಿ ದಿನಕ್ಕೆ ಸುಮಾರು 8 ಸಾವಿರ ಕೋಳಿಗಳು ಮಾರಾಟವಾಗುತ್ತಿತ್ತು. ಆದರೆ, ಈ ವೈರಸ್‌ನಿಂದಾಗಿ ನಿತ್ಯ ಒಂದು ಸಾವಿರ ಕೋಳಿ ಮಾರಾಟವಾಗುವುದು ಕಷ್ಟವಾಗಿದೆ. ನಾವು ಹೋಲ್‌ಸೆಲ್‌ನಲ್ಲಿ ಕೆ.ಜಿ. ಕೋಳಿ ಮಾಂಸವನ್ನು ₹50 ರಿಂದ ₹55 ರಂತೆ ಮಾರಾಟ ಮಾಡುತ್ತೇವೆ. ಎರಡು ವಾರದಿಂದ ಈಚೆಗೆ ₹8 ಲಕ್ಷ ನಷ್ಟ ಅನುಭವಿಸಿದ್ದೇವೆ ಎಂದು ಫಾರ್ಮ್‌ ಮಾಲೀಕ ದಾದಾಪೀರ್‌ ಬ್ಯಾಡಗಿ ಬೇಸರ ವ್ಯಕ್ತಪಡಿಸಿದರು.

ಕೋಳಿ ಮಾಂಸ ತಿನ್ನುವುದರಿಂದ ವೈರಸ್‌ ಹರಡುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುವ ಮೂಲಕ ವ್ಯಾಪಾರಕ್ಕೆ ಧಕ್ಕೆ ತರುತ್ತಿದ್ದಾರೆ. ಇದು ಅನೇಕ ಅಂಗಡಿ ಮಾಲೀಕರಿಗೂ ಸಮಸ್ಯೆಯಾಗುತ್ತಿದೆ. ಕಡಿಮೆ ಬೆಲೆಗೆ ಮಾರಾಟ ಮಾಡಿದರೂ ಮಾಂಸವನ್ನು ಖರೀದಿಸುತ್ತಿಲ್ಲ ಎಂದು ಅಂಗಡಿ ಮಾಲೀಕ ಬಡಿಗೇರ ಹೇಳಿದರು.

ಕೆಲವು ವಾರಗಳಿಂದ ವಿವಿಧ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಇದರಿಂದ ವ್ಯಾಪರಿಗಳಿಗೆ ಹಾಗೂ ರೈತರಿಗೆ ನಷ್ಟವಾಗುತ್ತಿದೆ. ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗುತ್ತಿದೆ ಆದರೂ ವ್ಯಾಪಾರವಿಲ್ಲ ಎನ್ನುತ್ತಾರೆ ವ್ಯಾಪಾರಿ ತೌಸಿಫ್‌ ಕೋಣನತಂಬಗಿ.

ಕೆಲವು ದಿನಗಳಿಂದ ಟೊಮೆಟೊ ಹಣ್ಣಿನ ಬೆಲೆ ಇಳಿಕೆಯಾಗುತ್ತಿದೆ. ಇದರಿಂದ ರೈತರು ಟೊಮೆಟೊವನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ಗುರುವಾರ ಸ್ವಲ್ಪ ಚೇತರಿಕೆ ಕಂಡಿದ್ದು, ಕೆ.ಜಿ. ಟೊಮೆಟೊ ₹10 ರಂತೆ ಮಾರಾಟವಾಗುತ್ತಿದೆ. ಅಲ್ಲದೆ, ಹಿಂದಿನ ವಾರ ಕೆ.ಜಿ.ಗೆ ₹30 ರಂತೆ ಮಾರಾಟವಾಗುತ್ತಿದ್ದ ಈರುಳ್ಳಿ, ಈ ವಾರ ಎರಡು ಕೆ. ಜಿ. ₹50ರಂತೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿ ಇಸ್ಮಾಯಿಲ್‌ ತಿಳಿಸಿದರು.

ಇನ್ನುಳಿದಂತೆ ಸೌತೆಕಾಯಿ ₹ 20, ಮೆಣಸಿನಕಾಯಿ ₹ 30, ಹೀರೇಕಾಯಿ ₹30, ಬೆಂಡೆಕಾಯಿ ₹ 30 ಇದೆ. ಅಲ್ಲದೆ, ಕ್ಯಾರೆಟ್‌ ₹ 30, ಬೀಟ್‌ರೂಟ್‌ ₹30, ಚವಳಿಕಾಯಿ ₹20, ಬೀನ್ಸ್‌ ₹20, ಆಲೂಗಡ್ಡೆ ₹30, ಬದನೆಕಾಯಿ(ಮುಳಗಾಯಿ) ₹20 ರಂತೆ ಮಾರಾಟವಾಗುತ್ತಿದೆ’ ಎಂದು ತೌಸಿಫ್‌ ವಿವರಿಸಿದರು.

ದಾಳಿಂಬೆ ಹಣ್ಣು ಈ ವಾರ ಕೆ.ಜಿ.ಗೆ ₹140ರಂತೆ ಮಾರಾಟವಾಗುತ್ತಿದೆ. ಚಿಕ್ಕು (ಸಪೋಟಾ) ₹60, ದ್ರಾಕ್ಷಿ ₹60, ಕಪ್ಪು ದ್ರಾಕ್ಷಿ ₹120 ಹಾಗೂ ಕಿತ್ತಳೆ ₹60ರಂತೆ ಮಾರಾಟವಾಗುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ರಸೂಲ್‌ ಮಾಹಿತಿ ನೀಡಿದರು.

ಸೇಬು ಬೆಲೆ ಏರಿಕೆ:

ದೇಶದಲ್ಲಿ ಬೆಳೆಯುವ ಸೇಬು ಹಣ್ಣಿನ ಸೀಜನ್‌ ಮುಗಿದಿದೆ. ಇಷ್ಟು ದಿನ ಶೇಖರಣೆಯಾಗಿದ್ದ ಹಣ್ಣು ಆವಕವಾಗುತ್ತಿತ್ತು. ಶೇಖರಣೆ ಪ್ರಮಾಣ ಕಡಿಮೆಯಾಗಿರುವುದರಿಂದ ಮುಂದಿನ ವಾರದಿಂದ ಸೇಬು ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ. ಸ್ಥಳೀಯ ಸೇಬು ಕೆ.ಜಿ 130 ರಂತೆ ಮಾರಾಟವಾಗುತ್ತಿದೆ. ವಿದೇಶದಿಂದ ಆಮದು ಆಗುತ್ತಿರುವ ಸೇಬು ₹140 ರಿಂದ 150 ರಂತೆ ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT