ಭಾನುವಾರ, ಜುಲೈ 25, 2021
22 °C

ಹಾವೇರಿ: ಆರೋಪಿ ಬಂಧನ: 8 ಬೈಕ್‌ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಬ್ಯಾಡಗಿ ತಾಲ್ಲೂಕು ಕಾಗಿನೆಲೆ ಗ್ರಾಮದ ಚಾಂದಬಾಷಾ ಶಿಕಾರಿಪುರ ಎಂಬಾತನನ್ನು ಹಾವೇರಿ ಶಹರ ಪೊಲೀಸ್‌ ಠಾಣೆ ಸಿಬ್ಬಂದಿ ಬಂಧಿಸಿ, ಆತನಿಂದ ₹1.86 ಲಕ್ಷ ಮೌಲ್ಯದ 8 ಮೋಟಾರ್ ಸೈಕಲ್‌ಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. 

ನಗರದ ಜಾನುವಾರು ಮಾರುಕಟ್ಟೆ ಸಮೀಪ ಪೊಲೀಸ್‌ ಸಿಬ್ಬಂದಿ ಗಸ್ತು ತಿರುಗುವ ವೇಳೆ, ಅನುಮಾನಾಸ್ಪದವಾಗಿ ಓಡಾಡುತ್ತಾ ಪೊಲೀಸರನ್ನು ನೋಡಿ ಓಡುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ತನಿಖೆಯಲ್ಲಿ ಹಾವೇರಿ ಶಹರ ಪೊಲೀಸ ಠಾಣೆಯ ಪಿ.ಐ. ಪ್ರಭಾವತಿ ಸಿ ಶೇತಸನದಿ, ಪಿ.ಎಸ್.ಐ ಪಿ.ಜಿ ನಂದಿ, ಪ್ರೊಬೆಷನರಿ ಸಬ್‌ಇನ್‌ಸ್ಪೆಕ್ಟರ್‌ ಚಂದನ್ ಹಾಗೂ ಎಎಸ್‌ಐ ಆರ್.ವಿ. ಸೊಪ್ಪಿನ್ ಮತ್ತು ಕಾನ್‌ಸ್ಟೆಬಲ್‌ಗಳಾದ ಪಿ.ಕೆ ಕರಿಯಣ್ಣನವರ, ಚಂದ್ರಶೇಖರ್ ಪೂಜಾರ, ಎಂ.ಎಂ. ತುಂಗಳ, ಎಂ.ಜಿ ದೊಡ್ಡಕಾರಗಿ, ತಿಪ್ಪಣ್ಣನವರ, ಗುಡ್ಡಪ್ಪ ಹಳ್ಳೂರು, ರಾಜು ಗೊಂದೆರ, ಸುರೇಶ ಎಂ ಹೆಚ್, ವಿನಾಯಕ ಮಳವಳ್ಳಿ ಹಾಗೂ ಜೀಪ್‌ ಚಾಲಕ ಎಸ್.ಎ ಪವಾರ ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು