ಹಾವೇರಿ: ‘ಷೇರು ವ್ಯವಹಾರ ಮಾಡಿದರೆ ಲಾಭ ಬರುತ್ತದೆ’ ಎಂದು ಹೇಳಿ ಯುವತಿ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ₹ 5.55 ಲಕ್ಷ ವಂಚನೆ ಮಾಡಲಾಗಿದ್ದು, ಈ ಸಂಬಂಧ ಹಾವೇರಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಶಿಗ್ಗಾವಿ ಪಟ್ಟಣದ 30 ವರ್ಷದ ನಿವಾಸಿ ದೂರು ನೀಡಿದ್ದಾರೆ. ಸೋನಿಯಾ ಗೋಯಲ್ ಎಂಬುವವರ ಹೆಸರಿನಲ್ಲಿ ಖಾತೆ ಸೃಷ್ಟಿಸಿ ವಂಚಿಸಿರುವ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಫೆ. 7ರಂದು ಮೆಸೆಂಜರ್ನಲ್ಲಿ ಸೋನಿಯಾ ಹೆಸರಿನಲ್ಲಿ ದೂರುದಾರರಿಗೆ ಸಂದೇಶ ಬಂದಿತ್ತು. ನಂತರ, ಪರಸ್ಪರ ಚಾಟಿಂಗ್ ನಡೆದಿತ್ತು. ಷೇರು ವ್ಯವಹಾರದ ಬಗ್ಗೆ ಹೇಳಿದ್ದ ಯುವತಿ, ಹೆಚ್ಚು ಹಣ ಸಂಪಾದಿಸುವ ಆಮಿಷವೊಡ್ಡಿ ಲಿಂಕ್ ಕಳುಹಿಸಿದ್ದರು. ಯುವತಿ ಮಾತು ನಂಬಿ ದೂರುದಾರ, ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು. ಆದರೆ, ಯಾವುದೇ ಹಣ ಬಂದಿಲ್ಲ. ಆರೋಪಿಯು ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.