ಮಂಗಳವಾರ, ಮೇ 17, 2022
26 °C
ನಗರದ ಸಂಚಾರ ನಿಯಮ ಅಧಿಸೂಚನೆ ಅನುಷ್ಠಾನ ಚರ್ಚೆ

ಲೋಡ್- ಅನ್‍ಲೋಡ್ ಸಮಯ ಬದಲಿಸಿ: ನೆಹರು ಓಲೇಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದಲ್ಲಿ ಸರಕುಗಳ ಲೋಡ್ ಹಾಗೂ ಅನ್‍ಲೋಡ್ ಸಮಯ ನಿಗದಿಗೆ ವ್ಯಾಪಾರಸ್ಥರು ಪ್ರತ್ಯೇಕ ಸಭೆ ನಡೆಸಿ ಸಮಯ ತಿಳಿಸಿದರೆ ಈ ಕುರಿತಂತೆ ಚರ್ಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಸೋಮವಾರ ಹಾವೇರಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಗರದ ಸುಗಮ ಸಂಚಾರ ವ್ಯವಸ್ಥ ಕುರಿತಂತೆ ಆಯೋಜಿಸಿದ್ದ ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿಶ್ಯಬ್ದ ವಲಯ, ಏಕಮುಖ ಸಂಚಾರ ಮಾರ್ಗಗಳು, ವಾಹನ ನಿಲುಗಡೆ ಸ್ಥಳ ಹಾಗೂ ಲೋಡ್-ಅನ್‍ಲೋಡ್ ಸಮಯ ಕುರಿತ ಅಧಿಸೂಚನೆ ಮೇಲೆ ಸುದೀರ್ಘವಾದ ಚರ್ಚೆಗಳು ನಡೆದು ಹಲವು ಸಲಹೆಗಳು ವ್ಯಕ್ತವಾದರು.

ಜಿಲ್ಲಾಧಿಕಾರಿ ಹೊರಡಿಸಿರುವ ನಗರ ಸಂಚಾರ ವ್ಯವಸ್ಥೆಯ ಅಧಿಸೂಚನೆ 1ರಿಂದ 4ರವರೆಗೆ ಯಾವುದೇ ಬದಲಾವಣೆ ಇಲ್ಲದೆ ವ್ಯಾಪಾರಸ್ಥರು ಸಹಮತ ವ್ಯಕ್ತಪಡಿಸಿದರು. ಆದರೆ, ಲೋಡ್-ಅನ್‍ಲೋಡ್ ಮಾಡಲು ನಿಗದಿಪಡಿಸಿರುವ ಸಮಯದಲ್ಲಿ ಹಮಾಲರು ಸೇರಿದಂತೆ ಕಾರ್ಮಿಕರ ಸಮಸ್ಯೆ ಕಾರಣ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುವುದಾಗಿ ಸಭೆಯ ಗಮನ ಸೆಳೆದರು.

ಖಾಸಗಿ ವಾಹನಗಳು, ಟ್ಯಾಕ್ಸಿಗಳ ನಿಲುಗಡೆ, ಹಲವು ಸಂಚಾರ ದಟ್ಟಣೆ ಸ್ಥಳಗಳಲ್ಲಿ ಟ್ರಾಫಿಕ್ ಪೋಲಿಸ್‍ಗಳ ನೇಮಕ, ಬೀದಿಬದಿ ವ್ಯಾಪಾರಸ್ಥರಿಗೆ ಸ್ಥಳ ಗುರುತಿಸುವಿಕೆ, ಕಳ್ಳತನ ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ದುರಸ್ತಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ನಗರಸಭೆ ಉಪಾಧ್ಯಕ್ಷರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು